ಕನ್ಯಾಕುಮಾರಿಯಲ್ಲಿ ಮೋದಿ ಧ್ಯಾನ ಆರಂಭ

0
181

ತಿರುವನಂತಪುರಂ – ಲೋಕಸಭಾ ಚುನಾವಣೆಯ ಕೊನೆಯ ಹಂತದ ಚುನಾವಣಾ ಪ್ರಚಾರ ಮುಗಿಸಿದ ಕೂಡಲೆ ನರೇಂದ್ರ ಮೋದಿ ತಮ್ಮ ೪೫ ತಾಸುಗಳ ಧ್ಯಾನ ಪೂರೈಸಲು ತಮಿಳುನಾಡಿನ ಕನ್ಯಾಕುಮಾರಿಗೆ ತಲುಪಿದ್ದು ಸ್ವಾಮಿ ವಿವೇಕಾನಂದರ  ಸ್ಮಾರಕ ಶಿಲೆಯ ಮೇಲೆ ಐತಿಹಾಸಿಕ ಸ್ಥಳದಲ್ಲಿ ಧ್ಯಾನ ಆರಂಭಿಸಿದರು.

ಇದಕ್ಕಿಂತ ಮುಂಚೆ ಮೋದಿಯವರು ಪ್ರಸಿದ್ಧ ಶ್ರೀ ಭಗವತಿ ಅಮ್ಮಾನ್ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ತಿರುವನಂತಪುರಂ ನಿಂದ ಸರಿಯಾಗಿ ೫ ಗಂಟೆಗೆ ಕನ್ಯಾಕುಮಾರಿಗೆ ವಿಶೇಷ ವಿಮಾನದಲ್ಲಿ ಆಗಮಿಸಿದ ಮೋದಿ ವಿವೇಕಾನಂದರಿಗೆ ಪೂಜೆ ಸಲ್ಲಿಸಿದರು. ಧ್ಯಾನ ಆರಂಭಿಸುವ ಮುಂಚೆ ನರೇಂದ್ರ ಮೋದಿಯವರಿಗೆ ಶಾಲು ಹಾಗೂ ಮಾತಾ ಭಗವತಿ ಅಮ್ಮಾನ್ ಅವರ ಫೋಟೋ ನೀಡಲಾಯಿತು.

ಮೋದಿ ಸಾಯಂಕಾಲ ೬.೨೮ ಕ್ಕೆ ಧ್ಯಾನ ಮಂದಿರ ಪ್ರವೇಶೀಸಿದರು. ಅವರು ಜೂನ್ ೧ ರ ಸಂಜೆಯವರೆಗೂ ಧ್ಯಾನ ಮಂದಿರದಲ್ಲಿ ಇರುತ್ತಾರೆ.

೨೦೨೪ ರ ಲೋಕಸಭಾ ಚುನಾವಣೆಯ ಪ್ರಯುಕ್ತ ಈವರೆಗೂ ಪ್ರಧಾನಿ ನರೇಂದ್ರ ಮೋದಿಯವರು ದೇಶಾದ್ಯಂತ ೨೦೬ ರ್ಯಾಲಿಗಳನ್ನು ನಡೆಸಿದ್ದಾರೆ. ಚುನಾವಣೆಯ ಪ್ರಚಾರ ಕಾರ್ಯ ಮುಗಿಯುತ್ತಲೇ ಆಧ್ಯಾತ್ಮಿಕ ಸ್ಥಳಗಳಲ್ಲಿ ಧ್ಯಾನ ಮಾಡುವುದನ್ನು ಮೋದಿಯವರು ಪಾಲಿಸಿಕೊಂಡು ಬಂದಿದ್ದಾರೆ.

೨೦೧೪ ಹಾಗೂ ೨೦೧೯ ರಲ್ಲಿಯೂ ಮೋದಿಯವರು ಧ್ಯಾನಕ್ಕೆ ಕುಳಿತಿದ್ದರು.

ವಿಪಕ್ಷಗಳಿಂದ ದೂರು

ಈ ಮಧ್ಯೆ ನರೇಂದ್ರ ಮೋದಿಯವರ ಈ ಧ್ಯಾನ ಸಾಧನೆಯನ್ನು ಟಿವಿಗಳಲ್ಲಿ ಪ್ರಸಾರ ಮಾಡಬಾರದು ಎಂದು ವಿಪಕ್ಷಗಳು ಚುನಾವಣಾ ಆಯೋಗಕ್ಕೆ ದೂರು ನೀಡಿವೆ. ಪ್ರಧಾನಿಯವರ ಧ್ಯಾನದ ಕುರಿತಂತೆ ತಲೆಗೊಂದು ಮಾತನಾಡುತ್ತಿರುವ ವಿಪಲ್ಷ ನಾಯಕರು ಮೋದಿಯವರ ಈ ಸಾಧನೆಯನ್ನು ಡ್ರಾಮಾ ಎಂದು ಕರೆದು ಜನರಿಂದ ಉಗಿಸಿಕೊಳ್ಳುತ್ತಿದ್ದಾರೆ.