spot_img
spot_img

ಮೋದಿ ಸನಾತನ ಸಂಸ್ಕೃತಿ ಜೊತೆಗೆ ದೇಶದ ಸಾಂಸ್ಕೃತಿಕ ಮೌಲ್ಯಗಳನ್ನು ಶ್ರೀಮಂತ ಗೊಳಿಸಿದ್ದಾರೆ – ನವೀನ್ ಕುಮಾರ್ ಪೆ.ನಾ

Must Read

- Advertisement -

ಬೆಂಗಳೂರು – 75ನೇ‌ ಗಣರಾಜ್ಯೋತ್ಸವ ಹಿನ್ನೆಲೆ‌ ಬೆಂಗಳೂರಿನ ಬನಶಂಕರಿ 3 ನೇ ಹಂತದ ಗುರುದತ್ತ ಬಡಾವಣೆಯಲ್ಲಿ ಇರುವ ಸಾಕೇತ್ ಅಪಾರ್ಟ್ಮೆಂಟ್ ಮಾಲೀಕರ ಸಹಕಾರ ಸಂಘ ನಿಯಮಿತದ ವತಿಯಿಂದ 75 ನೇ (ಅಮೃತ ಮಹೋತ್ಸವ)ಗಣರಾಜ್ಯೋತ್ಸವ ದಿನಾಚರಣೆಯನ್ನು ಆಚರಿಸಲಾಯಿತು.

ಸಾಕೇತ್ ಅಪಾರ್ಟ್ಮೆಂಟ್ ಮಾಲೀಕರ ಸಹಕಾರ ಸಂಘ ನಿಯಮಿತದ ಅಧ್ಯಕ್ಷರಾದ ನವೀನ್ ಕುಮಾರ್ ಪೆ.ನಾ ಧ್ವಜಾರೋಹಣ ಮಾಡಿ ಮಾತನಾಡುತ್ತಾ, ರಾಮಮಂದಿರದಲ್ಲಿ ಶ್ರೀ ರಾಮಲಲ್ಲಾನ ಪ್ರಾಣ ಪ್ರತಿಷ್ಠೆ ಮಾಡಿರುವ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಈ ಬಾರಿಯ ಗಣ ರಾಜ್ಯೋತ್ಸವದ ಮೆರುಗು ಹೆಚ್ಚಿಸಿ ದೇಶದಲ್ಲಿ ಸನಾತನ ಸಂಸ್ಕೃತಿ ಜೊತೆ ಜೊತೆಗೆ ದೇಶದ ಸಾಂಸ್ಕೃತಿಕ ಮೌಲ್ಯಗಳನ್ನು ಶ್ರೀಮಂತಗೊಳಿಸಿದ್ದಾರೆ ಎಂದು ನುಡಿದರು.

ಹಿರಿಯ ಉಪನ್ಯಾಸಕರಾದ ವಸಂತ ರವರು ಮಾತನಾಡಿ, ಸಂವಿಧಾನ ರಚನೆ, ಜಾರಿ ಕುರಿತು ವಿವರಿಸಿ, ದೇಶದ ಸಮಸ್ತ ಜನತೆಗೆ 75ನೇ ಗಣರಾಜ್ಯೋತ್ಸವದ ಶುಭಾಶಯ ತಿಳಿಸಿ, ಹಾಗೇ ದೇಶಭಕ್ತಿ ಗೀತೆ ಹಾಡಿದರು.
ಪುಟಾಣಿ ಮಕ್ಕಳಾದ ಶಾರ್ವರಿ, ಸುಧನ್ವ ವೈಷ್ಣವಿ ತಂಡ ದೇಶ ಭಕ್ತಿ ಗೀತೆ ಹಾಡಿದರು.

- Advertisement -

ಸಾಕೇತ್ ಅಪಾರ್ಟ್ಮೆಂಟ್ ನಿವಾಸಿಗಳು, ಮಕ್ಕಳು ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವಿಯಾಗಿಸಿದರು.
ಸಾಕೇತ್ ಅಪಾರ್ಟ್ಮೆಂಟ್ ಮಾಲೀಕರ ಸಹಕಾರ ಸಂಘ ನಿಯಮಿತ ದ ಕಾರ್ಯದರ್ಶಿ ಚಂದ್ರಶೇಖರರವರು ಅತಿಥಿ ಗಳನ್ನು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.


ವರದಿ: ತೀರ್ಥಹಳ್ಳಿ ಅನಂತ ಕಲ್ಲಾಪುರ

- Advertisement -
- Advertisement -

Latest News

ಪೌರಕಾರ್ಮಿಕರ ಆರ್ಥಿಕ ಹಾಗೂ ಸಾಮಾಜಿಕ ಬೆಳವಣಿಗೆಗೆ ಸಮುದಾಯ ಸಹಕರಿಸಲಿ- ಬಾಲಚಂದ್ರ ಜಾಬಶೆಟ್ಟಿ.

ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆಯಲ್ಲಿ ಪರಿಸರ ಸ್ನೇಹಿ ತಂತ್ರಜ್ಞಾನಗಳ ಅಳವಡಿಕೆ ಕುರಿತ ಉಪನ್ಯಾಸ   ಧಾರವಾಡ- ಇಲ್ಲಿನ ಕರ್ನಾಟಕ ವಿದ್ಯಾವರ್ಧಕ ಸಂಘದ ವಿಜ್ಞಾನ ಮಂಟಪದ ವಿಶೇಶ ಉಪನ್ಯಾಸ...
- Advertisement -

More Articles Like This

- Advertisement -
close
error: Content is protected !!
Join WhatsApp Group