ಗದಗ ಪಟ್ಟಣದ ತಮ್ಮಣ್ಣ ವೀರಪ್ಪ ಬಳ್ಳಾರಿ ಹಾಗೂ ಚೆನ್ನಮ್ಮ ಬಳ್ಳಾರಿ ದಂಪತಿಗಳ ಉದರದಲ್ಲಿ 13. 10 .1927 ರಲಿ ಜನಿಸಿದ ಶಾರದಮ್ಮನವರಿಗೆ ಮೂರು ಮಂದಿ ಸಹೋದರರು ಒಬ್ಬರು ಸಹೋದರಿಯರು.1946 ರಲ್ಲಿ ರಾಮದುರ್ಗದ ಸ್ವಾತಂತ್ರ್ಯ ಹೋರಾಟಗಾರ ದಿವಂಗತ ಮಹಾದೇವಪ್ಪ ಶಿವಪ್ಪಬಸಪ ಪಟ್ಟಣ ಇವರನ್ನು ಮದುವೆಯಾದರು.
ಮೋಹನ್ ಮಾದೇವಪ್ಪ ಪಟ್ಟಣ
ಅಶೋಕ್ ಮಾದೇವಪ್ಪ ಪಟ್ಟಣ
ಸುರೇಶ್ ಮಹಾದೇವಪ್ಪ ಪಟ್ಟಣ
ಮೃಣಾಲಿನಿ ಮಾದೇವಪ್ಪ ಪಟ್ಟಣ
ಮಧುಮತಿ ಮಹಾದೇವಪ್ಪ ಪಟ್ಟಣ
ಪ್ರದೀಪ್ ಕುಮಾರ್ ಮಹಾದೇವಪ್ಪ ಪಟ್ಟಣ
ನಾಲ್ಕು ಜನ ಗಂಡು ಮಕ್ಕಳಿಗೆ ಹಾಗೂ ಇಬ್ಬರು ಹೆಣ್ಣು ಮಕ್ಕಳಿಗೆ ಜನ್ಮವೆತ್ತಿದ್ದಾರೆ
ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಮಾಜಿ ಶಾಸಕನಾಗಿರುವಂತ ಮಹಾದೇವಪ್ಪ ಶಿವಬಸಪ್ಪ ಪಟ್ಟಣ ಗಾಂಧೀಜಿಯವರ ಅನುಯಾಯಿಯಾಗಿದ್ದರು .
1948ರಲ್ಲಿ ಗಾಂಧೀಜಿಯವರ ಹತ್ಯೆಯಾದಾಗ ಅವರ ಚಿತಾ ಭಸ್ಮವನ್ನು ತೆಗೆದುಕೊಂಡು ಮನಿಹಾಳದಲಿ ಪ್ರತಿಷ್ಠಾಪಿಸಿದಾಗ ಮೊದಲ ಗಂಡು ಮಗುವಿಗೆ ಜನ್ಮ ಕೊಟ್ಟ ಶಾರದಮ್ಮನವರು ಗಾಂಧೀಜಿಯವರ ನೆನಪಿಗಾಗಿ ತನ್ನ ಮಗನಿಗೆ ಪ್ರಥಮ ಗಂಡು ಮಗನಿಗೆ ಮೋಹನ್ ಅಂತ ಹೆಸರಿಟ್ಟರು ..
ಇದು ಪಟ್ಟಣವರ ರಾಷ್ಟ್ರೀಯತೆಯ ಮನೆತನಕ್ಕೆ ಉದಾಹರಣೆ ಆಗಿದೆ.1962-67 ಅವದಿಯಲ್ಲಿ ರಾಮದುರ್ಗದ ಪ್ರಥಮ ಮಹಿಳಾ ಶಾಸಕಿಯಾಗಿ ಆಯ್ಕೆಯಾದರು.ರಾಮದುರ್ಗದ ಜನರಿಗೆ ಮಲಪ್ರಭಾ ನದಿಯಿಂದ ತೊಂದರೆಯಾದಾಗ ರಾಮದುರ್ಗದ ಹೊಸ ಫೂಲ್ ಮಾಡಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.ಶಿವಪೇಟೆ ಗ್ರಾಮದ ನಿರ್ಮಾಣ ಇವರಿಂದಲೇ ಆಗಿದೆ
ರಾಜಕೀಯ ಮನೆತನವಾದರೂ ರಾಜಕೀಯ ಚಟುವಟಿಕೆಗಳ ಜೊತೆಗೆ ಎಲ್ಲ ಮಕ್ಕಳಿಗೂ ವಿದ್ಯಾಭ್ಯಾಸ ಒಳ್ಳೆಯ ಶಿಕ್ಷಣವನ್ನು ಕೊಡಿಸಿದ ಮಹಾಮಾತೆ ಇವರು. ತಮ್ಮ ಎರಡನೆಯ ಪುತ್ರ ಅಶೋಕ್ ಮಹದೇವಪ್ಪ ಪಟ್ಟಣ ಅವರು ಶಾಸಕರಾದಾಗ ಎಲ್ಲಾ ರಾಮದುರ್ಗ ತಾಲೂಕಿನ ಜನತೆಗೆ ಹಾಗೂ ಮನೆಗೆ ಬರುವ ಕಾರ್ಯಕರ್ತರಿಗೆ ಆತ್ಮೀಯತೆಯಿಂದ ಮಾತನಾಡಿಸಿ ಅತಿಥಿ ಸತ್ಕಾರ ಮಾಡುವುದರಲ್ಲಿ ಬಹಳಷ್ಟು ಜನಪ್ರಿಯ ರಾಗಿದ್ದರು . ಜೊತೆಗೆ ತನ್ನ ಮಗನಾದ ಅಶೋಕ್ ಪಟ್ಟಣ ಶಾಸಕರಿಗೆ ರಾಜಕೀಯ ಮಾರ್ಗದರ್ಶನ ಹಾಗೂ ಬಡವರ ಕಾಳಜಿಯನ್ನು ಮಾಡಲು ತಪ್ಪಿದಾಗ ಬುದ್ಧಿ ಹೇಳುವ ಕೆಲಸವನ್ನು ಅವರು ಮಾಡುತ್ತಿದ್ದರು
ಅವರ ಹುಟ್ಟುಹಬ್ಬ ಈ ಸಂದರ್ಭದಲ್ಲಿ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು
ಡಾ ಶಶಿಕಾಂತ ಪಟ್ಟಣ ರಾಮದುರ್ಗ