ತಾಯಂದಿರು ಮಕ್ಕಳಿಗೆ ಅವಶ್ಯ ಎದೆಹಾಲು ಕುಡಿಸಬೇಕು

Must Read

ಸಿಂದಗಿ: ತಾಯಂದಿರ ಎದೆಹಾಲು ಅಮೃತಕ್ಕೆ ಸಮಾನ ಅದ್ದರಿಂದ ಎಲ್ಲಾ ತಾಯಂದಿರು ಹೆರಿಗೆಯಾದ ಒಂದು ಗಂಟೆಯ ಒಳಗೆ ಮಗುವಿಗೆ ಎದೆಹಾಲು ಕುಡಿಸಬೇಕು. ಎರಡು ದಿನಗಳಲ್ಲಿ ಬರುವ ಗಿಣ್ಣದ ಹಾಲಿನಲ್ಲಿ ಕೊಲೆಸ್ಟ್ರಮ್ ಅಂಶ ಇದ್ದು ಇದು ತುಂಬಾ ಪೌಷ್ಟಿಕ ದಿಂದ ಕೂಡಿರುತ್ತದೆ ಅದ್ದರಿಂದ ತಾಯಂದಿರು ಮರೆಯದೆ ಎದೆ ಹಾಲು ನೀಡಬೇಕು ಎಂದು ಆರೋಗ್ಯ ಇಲಾಖೆಯ ಶಿಕ್ಷಣಾಧಿಕಾರಿ ಎಸ್.ಡಿ.ಕುಲಕರ್ಣಿ ಹೇಳಿದರು.

    ಪಟ್ಟಣದ ವಾರ್ಡ ನಂ 12 ರ ಅಂಗನವಾಡಿ ಕೇಂದ್ರದಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮದ ಉದ್ಘಾಟಸಿ ಮಾತನಾಡಿದ ಅವರು,  ಆರು ತಿಂಗಳವರೆಗೆ ಎದೆ ಹಾಲು ಮಾತ್ರ ಕೊಡಬೇಕು. ಜೇನು ತುಪ್ಪ, ಸಕ್ಕರೆ ನೀರು, ಬೇರೆ ಹಾಲು ಕುಡಿಸಬಾರದು ಗರಿಷ್ಠ ಎರಡು ವರ್ಷದವರೆಗೆ ಎದೆಹಾಲು ಕೊಡುವುದರಿಂದ ಮಗುವಿನ ಸರ್ವಾಂಗೀಣ ಬೆಳವಣಿಗೆ ಆಗುವುದಲ್ಲದೆ ತಾಯಿ ಎದೆ ಹಾಲು ಕುಡಿಸುವದರಿಂದ ತಾಯಂದಿರಿಗೆ ಎದೆಯ ಕ್ಯಾನ್ಸರ್, ಗರ್ಭಾಶಯ ಕ್ಯಾನ್ಸರ್ ಬರುವದಿಲ್ಲ ಎಂದು ಮನವರಿಕೆ ಮಾಡಿದರು.

      ಈ ಸಂದರ್ಭದಲ್ಲಿ ಶಿಶು ಅಭಿವೃದ್ಧಿ ಅಧಿಕಾರಿ ಎಸ್.ಎನ್.ಕೊರವಾರ ಮಾತನಾಡಿ,  ತಾಯಿಯ ಎದೆ ಹಾಲು ಶ್ರೇಷ್ಠವಾದದ್ದು ಮೇಲಿನ ಹಾಲು, ಬಾಟಲ್ ಹಾಲು ಕುಡಿಸಬಾರದು, ತಾಯಿ ಮಗುವಿಗೆ ಎದೆ ಹಾಲು ಪ್ರಥಮ ಲಸಿಕೆ ಇದ್ದಂತೆ ಅದರಿಂದ ಮಗುವಿನ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಎಂದು ತಿಳಿಸಿದರು,

     ಕಾರ್ಯಕ್ರಮದಲ್ಲಿ ಪಿ.ಎಚ್.ಸಿ.ಒ ಚಿಕರೆಡ್ಡಿ, ಅಂಗನವಾಡಿ ಮೇಲ್ವಿಚಾರಕಿ ಸುನೀತಾ, ಆಶಾ ಸುಗಮಕಾರರಾದ ರೂಪಾ ಆಲಮೇಲ, ಆಶಾ, ಗೀತಾ, ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಅನೇಕರು ಇದ್ದರು,

Latest News

ಪ್ರಗತಿಪರ ಕೃಷಿಕರು ನಟರು ಪುಟ್ಟಸ್ವಾಮಿಗೌಡ ಆರ್.ಕೆ.

ಪುಟ್ಟಸ್ವಾಮಿಗೌಡ ಆರ್. ಕೆ. ರಂಗಭೂಮಿ ನಟ ಪ್ರಗತಿ ಪರ ಕೃಷಿಕರು. ಮೊನ್ನೆ ಮೈಸೂರಿನಲ್ಲಿ ಚೆನ್ನರಾಯಪಟ್ಟಣದ ಡಾ.ಚಂದ್ರ ಕಾಳೇನಹಳ್ಳಿ ರಚನೆ ನಿರ್ವಹಣೆಯಲ್ಲಿ ದಸರಾ ಉತ್ಸವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ...

More Articles Like This

error: Content is protected !!
Join WhatsApp Group