Mudalagi: ಕರಾಟೆ ಪಂದ್ಯಾವಳಿ

Must Read

ಮೂಡಲಗಿ : ಮೂಡಲಗಿ ಶೈಕ್ಷಣಿಕ ವಯಲದ ಶಿಂಧಿಕುರಬೇಟ ಗ್ರಾಮದ ಮಹಾಕಾಳಿ ಶಿಕ್ಷಣ ಸಂಸ್ಥೆಯ ಸಿದ್ದರಾಮೇಶ್ವರ ಆದರ್ಶ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಇತೀಚೆಗೆ ತಾಲೂಕಾ ಮಟ್ಟದ ಕರಾಟೆ ಪಂದ್ಯಾವಳಿಗಳು ಜರುಗಿದವು.

ಪಟ್ಟಣದ ಲಕ್ಷ್ಮಣ ವಾಯ್. ಅಡಿಹುಡಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ 9 ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದುಕೊಂಡು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಹಾಗೂ ಪಟ್ಟಣದ ಎಸ್.ಎಸ್.ಆರ್. ಕಾಲೇಜು ಆವರಣದಲ್ಲಿ ಜರುಗಿದ ತಾಲೂಕು ಮಟ್ಟದ ಪಂದ್ಯಾವಳಿಯಲ್ಲಿ ಶೆಟಲ್ ಬ್ಯಾಡ್ಮಿಂಟನ್‍ನಲ್ಲಿ 5 ವಿದ್ಯಾರ್ಥಿಗಳು ಪ್ರಥಮ ಸ್ಥಾನ ಮತ್ತು ಹರ್ಡಲ್ಸ್ ನಲ್ಲಿ ಆಕಾಶ ಕದಮ ಪ್ರಥಮ ಸ್ಥಾನ, ಬಾಲಕಿಯರ ಕ್ರಿಕೇಟ ತಂಡ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗುವ ಮೂಲಕ ಶಾಲೆಗೆ ಕೀರ್ತಿಯನ್ನು ತಂದಿದ್ದಾರೆ.

ಅರಬಾಂವಿ ಶಾಸಕ ಬಾಲಚಂದ್ರ ಲ. ಜಾರಕಿಹೊಳಿ ಹಾಗೂ ಬಿಇಒ ಅಜೀತ ಮನ್ನಿಕೇರಿ, ಸಂಸ್ಥೆಯ ಸಂಸ್ಥಾಪಕ ಲಕ್ಷ್ಮಣ ಅಡಿಹುಡಿ, ತಾಲೂಕಾ ದೈಹಿಕ ಶಿಕ್ಷಣ ಪರಿವಿಕ್ಷಕರು ಎ. ಎ. ಜುನೇದಿಪಟೇಲ ಹಾಗೂ ಶಾಲಾ ಶಿಕ್ಷಕರ ವೃಂದ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಅಭಿನಂದನೆಯನ್ನು ತಿಳಿಸಿದ್ದಾರೆ.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group