ಬೀದರ – ದೇಶದಾದ್ಯಂತ ಎಲ್ಲಾದರೂ ಮುಸ್ಲಿಂ ಸಮುದಾಯದ ವಿರುದ್ಧ ಅನ್ಯಾಯ ಆಗುತ್ತಿದೆ ಎಂದರೆ ಬೀದರ್ ನಲ್ಲಿ ಪ್ರತಿಭಟನೆ ಪ್ರಾರಂಭವಾಗುತ್ತದೆ.
ಉತ್ತರ ಪ್ರದೇಶದಲ್ಲಿ ಎಟಿಎಸ್ ಪೊಲೀಸರಿಂದ ಮೌಲಾನಾ ಕಲೀಂ ಸಿದ್ದಿಕಿ ಸಾಹೇಬ್ ಬಂಧನ ಖಂಡಿಸಿ ಪ್ರತಿಭಟನೆ ಮಾಡಿದರು.
ಗಡಿ ಜಿಲ್ಲೆಯ ಬೀದರ ಮುಸ್ಲಿಂ ಜನರು ನಡೆಸಿದ ಎಲ್ಲಾ ಪಕ್ಷಗಳ ಯುನೈಟೆಡ್ ಫೋರಂ ಬೀದರ್ ಇವರಿಂದ ಉತ್ತರ ಪ್ರದೇಶದ ಎಟಿಸ್ ವಿರುದ್ಧ ಪ್ರತಿಭಟನೆ ಮಾಡಿದರು. ಆದರೆ ಕೊರೋನಾ ನಿಯಮ ಉಲ್ಲಂಘನೆ ಮಾಡಿ ಮುಸ್ಲಿಂ ಸಮುದಾಯದ ಜನರು ಬೃಹತ್ ಪ್ರತಿಭಟನೆ ನಡೆಸಿದರು.
ಭಯೋತ್ಪಾದನಾ ನಿಗ್ರಹ ಪಡೆ ಉತ್ತರ ಪ್ರದೇಶದಲ್ಲಿ ಮೌಲಾನಾ ಕಲೀಂ ಸಿದ್ದಿಕಿ ಸಾಹೇಬ್ ಬಂಧನ ಮಾಡಿದ್ದನ್ನು ಖಂಡಿಸಿ ಕೇಂದ್ರ ಸರ್ಕಾರದ ಮತ್ತು ಉತ್ತರ ಪ್ರದೇಶದ ಪೋಲಿಸರ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಿದರು.ರ್ಯಾಲಿಯು ಮಹ್ಮದ್ ಗವಾನ್ ಮದರಸಾದಿಂದ ಡೆಪ್ಯುಟಿ ಕಮಿಷನರ್ ಕಚೇರಿಯವರೆಗೆ ಪ್ರತಿಭಟನೆ ಮಾಡಿದರು. ಡೆಪ್ಯೂಟಿ ಕಮಿಷನರ್ ಬೀದರ್ ಮೂಲಕ ಭಾರತದ ರಾಷ್ಟ್ರಪತಿಗೆ ಮನವಿ ಪತ್ರವನ್ನು ಸಲ್ಲಿಸಿದರು. ಆದರೆ ಇದೇ ನೆಪದಲ್ಲಿ ಕರೋನ ನಿಯಮ ಉಲಂಘನೆ ಮಾಡಿದ ಪ್ರತಿಭಟನೆ ಕಾರರ ವಿರುದ್ಧ ಪೊಲೀಸ್ ಇಲಾಖೆ ಮತ್ತು ಜಿಲ್ಲಾ ಆಡಳಿತ ಯಾವ ಕ್ರಮ ತೆಗೆದುಕೊಳ್ಳುತ್ತದೆಯೋ ನೋಡಬೇಕು.
ವರದಿ: ನಂದಕುಮಾರ ಕರಂಜೆ,
ಟೈಮ್ಸ್ ಆಫ್ ಕರ್ನಾಟಕ, ಬೀದರ