ಮಾಂಜ್ರಾ ನದಿಗೆ ಪ್ರವಾಹ ; ಹಾಳಾದ ಬೆಳೆ ಹಿಡಿದು ಹಾಡು ಹಾಡಿದ ರೈತ

Must Read

ಬೀದರ – ಮಹಾರಾಷ್ಟ್ರದ ಧನ್ನೆಗಾಂವ್ ಜಲಾಶಯದಿಂದ ಮಾಂಜ್ರಾನದಿಗೆ ೫೦ ರಿಂದ ೭೦ ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಹಿನ್ನೆಲೆಯಲ್ಲಿ ಮಾಂಜ್ರಾನದಿಗೆ ಭಾರೀ ಪ್ರಮಾಣದಲ್ಲಿ ನೀರು ಬಂದಿದ್ದು, ೬೦ ಕ್ಕೂ ಅಧಿಕ ಹಳ್ಳಿಗಳು ರಸ್ತೆ ಸಂಪರ್ಕ ಕಡೆದು ಕೊಂಡಿವೆ. ಜಿಲ್ಲೆಯ ಸುಮಾರು ೧ ಲಕ್ಷ ಹೆಕ್ಟೇರ್ ಬೆಳೆ ಹಾನಿ ಆಗಿದೆ.

ಪ್ರವಾಹದಿಂದಾಗಿ ಎಲ್ಲೆಡೆ ನೀರೇ ನೀರು ಕಾಣುತ್ತಿದ್ದು ಸಾವಿರಾರು ಎಕರೆಗಟ್ಟಲೆ ಹೊಲಗಳು ಮುಳುಗಿ ಅಪಾರ ಬೆಳೆ ಹಾನಿ ಸಂಭವಿಸಿದೆ.

ಜಿಲ್ಲೆಯಲ್ಲಿ ರೈತ ಸ್ವಾಮಿ ತನ್ನ ಹೊಲದಲ್ಲಿ ನಿಂತು ಹಾಡಿನ ಮೂಲಕ ಸರ್ಕಾರಕ್ಕೆ ಒತ್ತಡ ಹಾಕಿದ್ದು ಘಟನೆ.

ಈ ಮಧ್ಯೆ ಜಿಲ್ಲೆಯಲ್ಲಿ ರೈತ ಸ್ವಾಮಿ ತನ್ನ ಹೊಲದಲ್ಲಿ ನಿಂತು ಹಾಳಾದ ಸೊಯಾಬೀನ್ ಬೆಳೆಯನ್ನು ಕೈಯಲ್ಲಿ ಹಿಡಿದು ಹಾಡು ಹಾಡಿದ್ದು ಮನಕಲಕುವಂತಿದೆ. ರೈತ ಸ್ವಾಮಿ ಹಾಡಿನ ಮೂಲಕ ತನ್ನ ಕಣ್ಣೀರ ಹಾಕಿದ ವಿಡಿಯೋ ಇವಾಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಈ ವಿಡಿಯೋ ಸರ್ಕಾರದ ಕಣ್ಣು ತೆರೆಸಿದರೆ ಸಾಕು ಎಂಬುದು ಸಾರ್ವಜನಿಕರ ನಿರೀಕ್ಷೆಯಾಗಿದೆ.


ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ

Latest News

ಪೂ ಚಂ ತೇ ಅವರ ಸಿದ್ಧಾಂತ ಮೌಲ್ಯಗಳ ಪ್ರತಿಬಿಂಬ ಲಾಲ್ ಬಾಗ್ ಫಲ ಪುಷ್ಪ ಪ್ರದರ್ಶನ : ಡಿ. ಕೆ.ಶಿವಕುಮಾರ

ಬೆಂಗಳೂರು ನಗರದ ಲಾಲ್ ಬಾಗ್ ನಲ್ಲಿ ಜನವರಿ 15 ರಿಂದ 26ರ ವರೆಗೆ ಏರ್ಪಡಿಸಲಾಗಿರುವ ಫಲ ಪುಷ್ಪ ಪ್ರದರ್ಶನವನ್ನು ಡಿ. ಕೆ. ಶಿವಕುಮಾರ್ ಅವರು ಬುಧವಾರ...

More Articles Like This

error: Content is protected !!
Join WhatsApp Group