ರೈತರಿಗಾಗಿ PACS ಉದ್ಘಾಟಿಸಿದ ನರೇಂದ್ರ ಮೋದಿ

Must Read

ನವದೆಹಲಿ – ನಾವು ಕೃಷಿ ಕ್ಷೇತ್ರದಲ್ಲಿ ಹೊಸ ವ್ಯವಸ್ಥೆಗಳನ್ನು ಜಾರಿಗೆ ತರುವುದರೊಂದಿಗೆ ಕ್ಷೇತ್ರವನ್ನು ಆಧುನಿಕತೆಯ ಜೊತೆ ಜೋಡಿಸುತ್ತಿದ್ದೇವೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದರು.

ಸಹಕಾರದಿಂದ ಸಮೃದ್ಧಿ ಸಂಕಲ್ಪದ ಅಂಗವಾಗಿ ನವದೆಹಲಿಯ ಭಾರತ ಮಂಟಪಂ ನಲ್ಲಿ ಉದ್ಘಾಟನೆಗೊಂಡ ಪ್ರಾಥಮಿಕ ಕೃಷಿ ಸಹಕಾರಿ ಸಾಲ ಸಂಘಟನೆ ( PACS) ಸಮಾರಂಭದಲ್ಲಿ ಅವರು ಮಾತನಾಡಿದರು.

ಇಂದು ೧೮೦೦೦ ಪ್ಯಾಕ್ಸ್ ಗಳ ಕಂಪ್ಯೂಟರೀಕರಣ ಕೂಡ ವೇಗದ ಗತಿಯಲ್ಲಿ ನಡೆದಿದೆ ಇದರಿಂದ ಕೃಷಿ ಕ್ಷೇತ್ರವನ್ನು ಆಧುನಿಕ ತಂತ್ರಜ್ಞಾನ ದೊಂದಿಗೆ ಜೋಡಿಸಲು ಸಹಾಯವಾಗುತ್ತದೆ. ಸಹಕಾರವೆನ್ನುವುದು ಭಾರತದಲ್ಲಿ ಬಹಳ ಪುರಾತನ ವ್ಯವಸ್ಥೆಯಾಗಿದೆ. ಸಣ್ಣ ಸಣ್ಣ ವಸ್ತುಗಳಿಂದಲೂ ಬೃಹತ್ ಕಾರ್ಯಗಳನ್ನು ಮಾಡಬಹುದಾಗಿದೆ. ಸಹಕಾರವೇ ನಮ್ಮ ಆತ್ಮ ನಿರ್ಭರ ಸಮಾಜದ ಆಧಾರವಾಗಿತ್ತು. ಇದೊಂದು ಕೇವಲ ವ್ಯವಸ್ಥೆ ಅಷ್ಡೇ ಅಲ್ಲ ಇದೊಂದು ಭಾವನೆ ಯಾಗಿದೆ ಇದೊಂದು ಶಕ್ತಿಯಾಗಿದೆ. ಇದರಿಂದ ವಿಕಸಿತ ಭಾರತದ ಕಲ್ಪನೆ ಸಾಕಾರವಾಗುತ್ತದೆ ಎಂದರು.

ಸಹಕಾರವು ಜೀವನದೊಂದಿಗೆ ಸಂಬಂಧಿಸಿದ ಸಾಮಾನ್ಯ ಕೆಲಸದಿಂದ ಹಿಡಿದು ದೊಡ್ಡ ಪ್ರಮಾಣದ ಬದಲಾವಣೆಗಳನ್ನು ತರುತ್ತದೆ. ಕೃಷಿ ಕ್ಷೇತ್ರದ ವಿಚಲಿತ ವ್ಯವಸ್ಥೆಯನ್ನು ಒಂದುಗೂಡಿಸುತ್ತದೆ.  ರೈತ ಉತ್ಪಾದಕ ಕೇಂದ್ರ (ಎಫ್ ಪಿಓ) ದೊಂದಿಗೆ ಗ್ರಾಮಗಳ ಸಣ್ಣ ಉತ್ಪಾದಕರು ಕೂಡ ತಮ್ಮ ಉತ್ಪಾದನೆಗಳನ್ನು ವಿದೇಶಕ್ಕೆ ರಫ್ತು ಮಾಡಲು ಶಕ್ತರಾಗಿದ್ದಾರೆ. ದೇಶದಲ್ಲಿ ಈಗ ೮೦೦೦ ಎಫ್ ಪಿಓ ಗಳು ಆರಂಭವಾಗಿವೆ ಇದು ಸಹಕಾರದಿಂದ ಸಾಧ್ಯವಾಗಿದೆ ಎಂದರು.

ಈ ಸಹಕಾರ ಕ್ಷೇತ್ರವು ಮೀನು ಸಾಕಣೆ ಕ್ಷೇತ್ರಕ್ಕೂ ಈಗ ಸಂಬಂಧಿಸಿದೆ. ಬರುವ ವರ್ಷಗಳಲ್ಲ ಎರಡು ಲಕ್ಷ ಸಹಕಾರಿ ಸಂಘಗಳನ್ನು ಆರಂಭಿಸುವ ಲಕ್ಷ್ಯವಿದೆ ಎಂದು ಮೋದಿ ಹೇಳಿದರು.

ಸಮಾರಂಭದಲ್ಲಿ ಕೇಂದ್ರ ಗೃಹ ಮಂತ್ರಿ ಅಮಿತ ಷಾ, ಕೃಷಿ ಮಂತ್ರಿ ಅರ್ಜುನ ಮುಂಡಾ, ಸಚಿವ ಪಿಯೂಷ ಗೋಯಲ್ ಇದ್ದರು.

- Advertisement -
- Advertisement -

Latest News

ರಾಜ್ಯ ಸರ್ಕಾರದ ಎರಡು ವರ್ಷದ ಸಾಧನೆ ಶೂನ್ಯ

ಬೀದರ -  ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಹೊಸಪೇಟೆಯಲ್ಲಿ ನಡೆಯುತ್ತಿರುವ ಅದ್ಧೂರಿ ಸಂಭ್ರಮಾಚರಣೆಗೆ ಬಿಜೆಪಿ ಜಿಲ್ಲಾ ಸಹ ವಕ್ತಾರ...
- Advertisement -

More Articles Like This

- Advertisement -
close
error: Content is protected !!
Join WhatsApp Group