spot_img
spot_img

ವೈದ್ಯಕೀಯ ಹಾಗೂ ಸಾಹಿತ್ಯ ಸೇವೆ ಜೀವಮಾನದ ಸಾಧನೆ ರಾಷ್ಟ್ರೀಯ ಪ್ರಶಸ್ತಿ – ಡಾ ಸುರೇಶ ನೆಗಳಗುಳಿ

Must Read

- Advertisement -

ನಾಡಿನ ಸಮಾಚಾರ ಸೇವಾ ಸಂಘ ಹಾಗೂ ನಾಡಿನ ಸಮಾಚಾರ ದಿನಪತ್ರಿಕೆ ಸೇವಾ ಬಳಗ ಗೋಕಾಕ ಇದರ ಸಹಯೋಗದಲ್ಲಿ ಕನ್ನಡ ಸಾಹಿತ್ಯ ಭವನ ಬೆಳಗಾವಿ ಯಲ್ಲಿ ದಿ.8-9-24 ಭಾನುವಾರ ಸಾಮಾಜಿಕ ಶಿಕ್ಷಣ ಸಾಹಿತ್ಯ ಹಾಗೂ ವಿವಿಧ ಕಲೆಗಳನ್ನಾಧರಿಸಿ ಸಾಧನೆ ಮಾಡಿದವರಿಗೆ ಶಿಕ್ಷಕ ದಿನಾಚರಣೆಯ ನಿಮಿತ್ತ ನಡೆಯುವ ಗುರುವಂದನಾ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.

ಇದೇ ವೇಳೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ವಾಸವಾಗಿರುವ ವೈದ್ಯ ಹಾಗೂ ಬರಹಗಾರ ಡಾ ಸುರೇಶ ನೆಗಳಗುಳಿ ಅವರ ವೈದ್ಯಕೀಯ ಹಾಗೂ ಸಾಹಿತ್ಯ ಸೇವೆಯನ್ನು ಗುರುತಿಸಿ ಜೀವ‌ಮಾನದ ಸಾಧನೆಯ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಸಮಾರಂಭದ ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಡಾ ಸುರೇಶ ನೆಗಳಗುಳಿಯವರು ಬಂಟ್ವಾಳ ತಾಲೂಕಿನ ನೆಗಳಗುಳಿ ಮೂಲದವರಾಗಿದ್ದು ಮೂವತ್ತೈದು ವರ್ಷಗಳಿಂದ ವೈದ್ಯಕೀಯ ಶಿಕ್ಷಕರೂ,ಪ್ರಾಚಾರ್ಯರೂ ಆಗಿದ್ದು ಈಗಲೂ ಕಣಚೂರು ಹಾಗೂ ಮಂಗಳಾ ಆಸ್ತ್ರತ್ರೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದು ಮೂಲವ್ಯಾಧಿಗೆ ವಿಶೇಷ ಕ್ಷಾರ ಕರ್ಮವೆಂಬ ಶಸ್ತ್ರ ಚಿಕಿತ್ಸೆಯನ್ನೂ ನಡೆಸುತ್ತಿದ್ದಾರೆ.

- Advertisement -

ತುಷಾರ ಮಾಸಪತ್ರಿಕೆಯಲ್ಲಿ ನೂರಾರು ಚಿತ್ರಕವನಗಳಿಗೆ ಬಹುಮಾನ ಪಡೆದ ಇವರು ಮುಕ್ತಕ,ಗಜಲ್ ಸಹಿತ ಹದಿನಾಲ್ಕು ಕೃತಿಗಳನ್ಮು ಲೋಕಾರ್ಪಣೆ ಮಾಡಿರುತ್ತಾರೆ. ಹಾಗೂ 2022 ರ ಬಂಟ್ವಾಳ ತಾಲೂಕಿನ ಕ.ಸಾ.ಪ ಸಮ್ಮೇಳನದ ಸರ್ವಾಧ್ಯಕ್ಷತೆಯನ್ನೂ ವಹಿಸಿರುತ್ತಾರೆ.

- Advertisement -

1 COMMENT

LEAVE A REPLY

Please enter your comment!
Please enter your name here

- Advertisement -

Latest News

ನನ್ನ ಸಂವಿಧಾನ-ನನ್ನ ಹೆಮ್ಮೆ ಪುಸ್ತಕ ಬಿಡುಗಡೆ ಸಮಾರಂಭ 

     ಮೂಡಲಗಿ -  ಅಂತಾರಾಷ್ಟ್ರೀಯ  ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ಬೆಳಗಾವಿಯ ಇಷ್ಟಾ ಅಪಾರ್ಟ್ ಮೆಂಟ್ನಲ್ಲಿ ಮೂಡಲಗಿಯ ಜ್ಞಾನದೀಪ್ತಿ  ಫೌಂಡೇಶನ್ ಇವರ ವತಿಯಿಂದ ನಡೆದ ಸಮಾರಂಭದಲ್ಲಿ...
- Advertisement -

More Articles Like This

- Advertisement -
close
error: Content is protected !!
Join WhatsApp Group