ಬೆಳಗಾವಿ: ನಗರದ ಕೇಂದ್ರ ಗ್ರಂಥಾಲಯದಲ್ಲಿ ರಾಷ್ಟ್ರೀಯ “ಓದುವ, ಡಿಜಿಟಲ್ ಓದುವ” ತಿಂಗಳು ಕಾರ್ಯಕ್ರಮಕ್ಕೇ ಉಪನಿರ್ದೇಶಕರಾದ ರಾಮಯ್ಶಾ ಅವರು ಚಾಲನೆ ನೀಡಿದರು.
ಉತ್ತಮ ಗ್ರಂಥಗಳನ್ನು,ಓದಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು. ಅದು ಪುಸ್ತಕವಾಗಿರಬಹುದು ಅಥವಾ ಡಿಜಿಟಲ್ ರೂಪವಿರಬಹುದು,ಓದುವ ಹವ್ಯಾಸ ಬೆಳೆಸಿಕೊಳ್ಳಿ ಎಂದು ಅವರು ಕರೆ ನೀಡಿದರು.
ಪ್ರತಿ ವರ್ಷ ಜೂನ್ 19 ರಿಂದ ಜುಲೈ 18 ರ ವರೆಗೆ ರಾಷ್ಟ್ರೀಯ ಓದುವ ತಿಂಗಳು ಎಂದು ಎಲ್ಲೆಡೆ ಆಚರಿಸಲಾಗುತ್ತದೆ. ಮೂಲ ಉದ್ದೇಶ ಓದುಗರಲ್ಲಿ ಅದರಲ್ಲೂ ಯುವ ಜನತೆ ಯಲ್ಲಿ ಓದುವ ಹವ್ಯಾಸವನ್ನು ಬೆಳೆಸುವುದು.ರಾಷ್ಟ್ರೀಯ ಶಿಕ್ಷಣ ನೀತಿಯು ‘ಹೇಗೆ ಓದಬೇಕು’, ‘ಓದಲು ಕಲಿಯಿರಿ’, ‘ಕಲಿಯಲು ಓದು’ ಎಂಬುದಕ್ಕೆ ಒತ್ತು ನೀಡಿರುವುದನ್ನು ಸ್ಮರಿಸಬಹುದು.
ಇದೇ ಸಂದರ್ಭದಲ್ಲಿ ವಿವಿಧ ಬಗೆಯ ಪುಸ್ತಕಗಳ ಪ್ರದರ್ಶನವನ್ನೂ ಏರ್ಪಡಿಸಲಾಗಿದೆ. ಕಾರ್ಯಕ್ರಮದಲ್ಲಿ ಗ್ರಂಥಪಾಲಕರಾದ ಶಶಿಕಲಾ ಸೀಮಿಮಠ, ಸುಮಿತ್ ಕಾವಳೆ, ಪ್ರಕಾಶ ಇಚಲಕರಂಜಿ, ಅಂಬೇಕರ್, ಆನಂದ್, ಸಂಗೀತಾ, ರಾಜು, ಸುನಿಲ್, ಹೂಲಿ, ಲತಾ ಮುದರಡ್ಡಿ, ಪದ್ಮಪ್ರಿಯ, ಐಹೊಳೆ,ಮತ್ತಿತರು ಮತ್ತು ಓದುಗರು ಹಾಜರಿದ್ದರು.