ಶುಭ ಸಿಂಚನವಾಗಲಿ
ನವರಾತ್ರಿ ಕಳೆದು
ನವೋಲ್ಲಾಸ ತಳೆದು
ಸತ್ಯ, ಧರ್ಮಕೆ ಜಯ ಎಂದೆಂದೂ
ಸಾರುತ ಬಂದಿದೆ ದಸರಾ ಇಂದು
ಶ್ರೀರಾಮನಿಂದ ರಾವಣನ ಹರಣ
ಆದಿಶಕ್ತಿಯಿಂದ ರಾಕ್ಷಸರ ಸಂಹರಣ
ದುಷ್ಟರ ಸಂಹಾರ, ಶಿಷ್ಟರ ಉದ್ಧಾರ
ಸಾರ್ವಕಾಲಿಕ ಸತ್ಯ, ಪುರಾಣಗಳೇ ಇದಕೆ ಆಧಾರ
ಸದಾ ಸಜ್ಜನರ ಸಹವಾಸ
ಬೀರುತ ಮೊಗದಿ ಮಂದಹಾಸ
ತುಂಬಿರಲಿ ಮನದಿ ಪ್ರೀತಿ ವಿಶ್ವಾಸ
ಅರಿತು ನಡೆದೊಡೆ ಬಾಳೇ ಸಂತಸ
ದುಷ್ಕೃತ್ಯಕೆ ಶಿಕ್ಷೆ, ಸತ್ಕಾರ್ಯಕೆ ರಕ್ಷೆ
ಇದುವೇ ವಿಜಯದಶಮಿ ಹಬ್ಬದ ಆಕಾಂಕ್ಷೆ
ಶುಭ ಸಿಂಚನವಾಗಲೆಂಬುದೆನ್ನ ಅಪೇಕ್ಷೆ
ವಿಜಯ ದಶಮಿ ನೀಡಲಿ ಸರ್ವರಿಗೂ ಶ್ರೀರಕ್ಷೆ
ವಿದ್ಯಾ ಅ. ನಾಡಿಗೇರ
ಪಿ. ಆರ್. ಓ,
ಆಯುಕ್ತರ ಕಾರ್ಯಾಲಯ
ಧಾರವಾಡ

