- Advertisement -
ಅಪೇಕ್ಷೆ
ಬೆಳ್ಳಿ ಬಂಗಾರದ ಆಸೆಯಿಲ್ಲ ಕೊಟ್ಟಿದ್ದೀಯ ನೀ ನನಗೆಲ್ಲ.
ರೊಕ್ಕ ರೂಪಾಯಿಯ ನಸೆಯಿಲ್ಲ ಕರುಣಿಸಿದಿಯಾ ನೀನಿವಾಗಲೇ.
ಆಸ್ತಿ, ಅಂತಸ್ತಿನ, ಮಕ್ಕಳ, ಸಂಬಂಧಿಕರ ಕೊರತೆಯಿಲ್ಲ
ಜಾಮಯಿಸಿದಿಯ ಆಗಲೆ.
ಜ್ಞಾನ, ಸ್ಥಾನದ ಹಪಹಪಿಯಿಲ್ಲ
ತುಂಬಿದಿಯ ನನಗೆ ಬೇಕಾದಷ್ಟು ಆವಾಗಲೆ.
ನಾನು ನನ್ನದೇಎಂಬ ಭಾವವಿಲ್ಲ.
ನಿನ್ನದೆಲ್ಲವೂ ನನ್ನದೇಎಂಬ ಅಹಂ ನನಗೆ ಮೊದಲೇ ಇಲ್ಲ.
ನೀ ಕರುಣಿಸಿದ್ದೆಲ್ಲವನ್ನು ನಿನ್ನ ಆನತಿಯಂತೆ ನಡೆದುಕೊಳ್ಳುತ್ತಿರುವೇನಲ್ಲ
ದುಷ್ಟ, ದುರುಳರು ಆಡುವ ಚಿಲ್ಲರೆ ಮಾತುಗಳಿಗೆ ಗಮನ ಕೊಡುವ ಪ್ರಮೇಯವೇ ನನಗಿಲ್ಲ.
ನಿನ್ನೊಂದಿಗೆ ನಾನಿದ್ದೇನೆಂಬ ಹೃದಯಭಾವ ನನ್ನದು.
ಆಡಿಸಬೇಡ ಕೆಟ್ಟದ್ದು, ಮಾಡಿಸಬೇಡ ಕೆಟ್ಟದ್ದು.
ಇವೆಲ್ಲ ಅಂತರ್ಮನದ ತುಸುಮಾತುಗಳು ಪೆನ್ನಿನಂಚಲಿ
ತುಸುನಗುವಿನ ಸುಂದರ ಜೀವನದ ಮುಕ್ತಿ ಪಡೆಯುವ
ಭರವಸೆಯ ನೀರಿಕ್ಷೆಯಲಿ ನಾ ಕಾಯುತಿರುವೆ.
ದೇವ ದೇವಿಯರೇ ಇದೋ ಈ ಮೂಲಕ ಸಮರ್ಪಿಸುವೆ ನನ್ನ ಕವನಾಪೇಕ್ಷೆ.
ಉಮಾದೇವಿ.ಯು. ತೋಟಗಿ
ಸ. ಶಿ. ಸ. ಕ. ಹಿ. ಪ್ರಾ. ಶಾಲೆ. ರಾಮಾಪುರ