ಕವನ: ಸಹ್ಶಾದ್ರಿ

Must Read

ಸಹ್ಶಾದ್ರಿ

ಸಹ್ಶಾದ್ರಿ ಶ್ರೇಣಿ ಮುಗಿಲಿಗೆ ಏಣಿ
ಹಸಿರು ಹೆಮ್ಮರ ಛತ್ರಿ ಚಾಮರ
ದಟ್ಟ ಕಾನನ ಸುಂದರ ಗಿರಿ ಕಂದರ
ಅಲೆಗಳ ಕಲರವ ಅಂದದ ಕಡಲ ತೀರ

ಸಾಹಸದ ಏರಿಳಿವಿನ ರಹದಾರಿ
ಹೆಜ್ಜೆ ಹೆಜ್ಜೆಗೂ ತಿರುವು-ಮುರುವು
ನಳನಳಿಸುವ ತರು-ಲತೆಗಳ ರಿಂಗಣ
ಹರಿದ್ವರ್ಣ ಹೃದಯಂಗಮ ಅಂಗಣ

ಶ್ರೇಣಿ ಶ್ರೇಣಿ ಶಿಖರಗಳ ಅಂದ ಚೆಂದ
ಪಾತಾಳಕೆ ಇಳಿವ ಕೊಳ್ಳ ರುದ್ರ-ರಮಣೀಯ
ಧುಮ್ಮಿಕ್ಕುವ ಝರಿ ಜಲಪಾತಗಳು
ಲಗುಬಗೆಯಿಂದೋಡುವ ದಭೆದಭೆಗಳು

ವರ್ಷಧಾರೆಗೆ ಉಬ್ಬಿ ಓಡೋಡುತಲಿ
ಕಣ್ದುಂಬುವ ಸಂತಸದ ಜಲಧಾರೆ
ಕಂಗಳಿಗೆ ಕಾನನದ ನಿಬಿಡ ನೋಟ
ಹೃನ್ಮನಕೆ ಬಗೆಬಗೆಯ ಸವಿಯೂಟ

ವನ್ಶ-ಜೀವಿ, ಜೀವ-ಜಾಲ ಸಂಪತ್ತಿನಾಗರ
ಶುಕ ಪಿಕಗಳ ಉಲಿಯ ಇಂಚರ
ಭ್ರಮರ ಜೀರುಂಡೆಗಳ ಝೇಂಕಾರ
ನೇಸರದಿಂದ ಹೊಮ್ಮುವ ಓಂಕಾರ

ಅಂತಃಕರಣದಿ ಅಡಗಿದ ಮಮಕಾರ
ಓಂಕಾರ ನಾಥಂಗೆ ಸಾವಿರದ ಶರಣು
ದಿಂಙ್ಮೂಢ ಮನದಲ್ಲಿ ಕರಜೋಡಿಸಿ
ತೋರುವೆವು ಶಿರಬಾಗಿ.


ಅಮರ್ಜಾ
ಅಮರೇಗೌಡ ಪಾಟೀಲ ಜಾಲಿಹಾಳ
ಬುತ್ತಿ ಬಸವೇಶ್ವರ ನಗರ, ಕುಷ್ಟಗಿ

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group