ನೂತನ ಶಾಸಕರಿಗೆ ಸನ್ಮಾನ

Must Read

ಸಿಂದಗಿ: ಉಪ ಚುನಾವಣೆಯ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಅವರ 31 ಸಾವಿರ ಅಂತರದ ಗೆಲವು ಇಡೀ ರಾಜ್ಯ ಬಿಜೆಪಿಗೆ ಮುಂದಿನ ಚುನಾವಣೆಗೆ ಮುನ್ನುಡಿ ಬರೆದಂತಾಗಿದೆ ಎಂದು ಪುರಸಭೆ ನಾಮ ನಿರ್ದೇಶಿತ ಸದಸ್ಯ ರಾಮು ಮೋರಟಗಿ ಅಭಿಮತ ವ್ಯಕ್ತಪಡಿಸಿದರು.

ಪಟ್ಟಣದ ಶಾಸಕರ ಸ್ವಗೃಹದಲ್ಲಿ ಯಾದವ ಸಮಾಜದ ವತಿಯಿಂದ ನೂತನ ಶಾಸಕ ರಮೇಶ ಭೂಸನೂರ ಅವರನ್ನು ಗೌರವಿಸಿ ಮಾತನಾಡಿ, ಶಾಸಕ ಭೂಸನೂರ ಅವರು ಸದಾ ಜನರೊಂದಿಗೆ ಬೆರೆತು ಜನರ ಕಷ್ಟ ಸುಖಗಳಲ್ಲಿ ಭಾಗಿಯಾಗುವ ಸಹೃದಯಿ ದಣಿವರಿಯದ ಧಣಿ ಎನ್ನಬಹುದು. ಅವರು ಗ್ರಾಮ ಪಂಚಾಯತಿ, ತಾಲೂಕ ಪಂಚಾಯತಿ, ಜಿಲ್ಲಾ ಪಂಚಾಯತಿ ಸದಸ್ಯರಾಗಿ ಅಲ್ಲದೆ ಮೂರು ಬಾರಿ ಶಾಸಕರಾಗಿ ಸಿಂದಗಿ ತಾಲೂಕಿನ ರಾಜಕೀಯ ಇತಿಹಾಸದಲ್ಲಿ ದಾಖಲೆಗಳನ್ನು ಸೃಷ್ಟಿಸಿದ ಖ್ಯಾತಿ ಇವರಿಗೆ ಸಲ್ಲುತ್ತದೆ. ಇನ್ನೂ ಅವರ ಆಡಳಿತ ಅವಧಿಯಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದೇ ಆಡಳಿತ ನಡೆಸಿದ ಈ ಜಿಲ್ಲೆಯ ಏಕೈಕ ಅನುಭವಿ ಮತ್ತು ಎಲ್ಲ ವರ್ಗದ ಜನರ ಅಭಿವೃದ್ದಿ ಬಯಸುವ ರಮೇಶ ಭೂಸನೂರ ಅವರಿಗೆ ಬಿಜೆಪಿ ಸರ್ಕಾರ ಸಚಿವ ಸ್ಥಾನ ನೀಡುವ ಮೂಲಕ ಜಿಲ್ಲೆಯ ಸವಾಂಗೀಣ ಅಭಿವೃದ್ದಿಗೆ ಸಹಕರಿಸಬೇಕು ಎಂದು ಆಗ್ರಹಿಸಿದರು.

ಸಮಾಜದ ಮತಗಳನ್ನು ಬಿಜೆಪಿ ಪರವಾಗಿ ಸೆಳೆಯಲು ಪ್ರಚಾರಕ್ಕೆ ಆಗಮಿಸಿ ಸಮಾಜದ ಮತಗಳನ್ನು ಒಗ್ಗೂಡಿಸಿದ ಯಾದವ ಸಮಾಜದ ಏಕೈಕ ಶಾಸಕಿ ಪೂರ್ಣಿಮಾ ಶ್ರೀನಿವಾಸ ರವರಿಗೆ ಹೃತ್ಪೂರ್ವಕ ದನ್ಯವಾದಗಳು ಎಂದರು.

ಈ ಸಂರ್ದಭದಲ್ಲಿ ಸುರೇಶ ಮೋರಟಗಿ, ರವಿ ನಾಗಠಾಣ, ರಾಕೇಶ ಬಾಗೇವಾಡಿ, ಯಲ್ಲಪ್ಪ ಬಾಗಲಕೋಟೆ, ಶ್ಯಾಮ ಬಾಗೇವಾಡಿ, ರಾಜು ಮೋರಟಗಿ, ಆನಂದ ಬಾಗೇವಾಡಿ, ಅರ್ಜುನ ಹಡಗಲಿ, ಅಶೋಕ ಬಾಗೇವಾಡಿ ಅನೇಕರು ಇದ್ದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group