ಕ್ಷೇತ್ರಕ್ಕೆ ಸಂಪೂರ್ಣ ನೀರಾವರಿ ಮಾಡಿದ್ದು ಜೆಡಿಎಸ್ – ಗೊಲ್ಲಾಳಪ್ಪಗೌಡ

Must Read

ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಯೇ ನನ್ನ ಪರಮ ಗುರಿ : ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ

ನಿಪ್ಪಾಣಿಯಲ್ಲಿ ಎಲ್ಲ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳನ್ನು ಉದ್ಧೇಶಿಸಿ ಪ್ರಚಾರ ಮಾಡಿದ ಲಖನ್ ನಿಪ್ಪಾಣಿ: ಜಿಲ್ಲೆಯ ಸರ್ವತೋಮುಖ ಏಳ್ಗೆಗಾಗಿ ಹಾಗೂ ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಗಾಗಿ ಸೇವೆ ಸಲ್ಲಿಸಲು ಪ್ರಥಮ ಪ್ರಾಶಸ್ತ್ಯದ...

ಸುನಿಲಗೌಡ ಪಾಟೀಲ್ ಅವರ ಪರವಾಗಿ ಕಾಂಗ್ರೆಸ್ ಮುಖಂಡರ ಮತಯಾಚನೆ

ಸಿಂದಗಿ: ವಿಜಯಪುರ-ಬಾಗಲಕೋಟೆ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆಯ ಅಭ್ಯರ್ಥಿ ಸುನಿಲಗೌಡ ಪಾಟೀಲ್ ಅವರ ಪರವಾಗಿ ಕಾಂಗ್ರೆಸ್ ನಾಯಕರು ಯರಗಲ್, ಗಬಸಾವಳಗಿ, ಮೋರಟಗಿ, ಬಗಲೂರ ಗ್ರಾಮ...

ರಾಜಕೀಯ ದ್ವೇಷ; ಮಾಜಿ ಪಟ್ಟಣ ಪಂಚಾಯಿತಿಯ ಸದಸ್ಯನ ಭೀಕರ ಹತ್ಯೆ

ಸಿಂದಗಿ: ನೂತನ ತಾಲೂಕು ಆಲಮೇಲ ಪಟ್ಟಣದ ಗಣೇಶ ನಗರದಲ್ಲಿರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಹತ್ತಿರ ರಾತ್ರಿ 1.30 ಗಂಟೆಯ ಸುಮಾರಿಗೆ ಮಾಜಿ ಪಟ್ಟಣ ಪಂಚಾಯತಿ...

ಸಿಂದಗಿ: ಈ ಕ್ಷೇತ್ರ ಜನತಾದಳ ಕ್ಷೇತ್ರವಾಗಿದ್ದು ಈ ಕ್ಷೇತ್ರದಲ್ಲಿ ಸಂಪೂರ್ಣ ನೀರಾವರಿ ಮಾಡಿದ್ದು ಜೆಡಿಎಸ್ ಕೊಡುಗೆಯಾಗಿದೆ ಅದರಿಂದ ದಿ.ಎಂ.ಸಿ.ಮನಗೂಳಿ ಅವರಿಗೆ ಸತತ 7 ಬಾರಿ ಟಿಕೆಟ ನೀಡಿ ಮಂತ್ರಿ ಸ್ಥಾನ ನೀಡಿದ್ದು ಜೆಡಿಎಸ್ ಪಕ್ಷ ಇದನ್ನು ಮತದಾರರು ಅರಿತು ಕೊಳ್ಳದಿರುವ ಕಾರಣದಿಂದ ಸೋಲು ಅನುಭವಿಸಬೇಕಾಯಿತು ಎಂದು ತಾಲೂಕು ಘಟಕಾಧ್ಯಕ್ಷ ಗೋಲ್ಲಾಳಪ್ಪಗೌಡ ಪಾಟೀಲ ಗೋಲಗೇರಿ ಅಸಮಾದಾನ ವ್ಯಕ್ತಪಡಿಸಿದರು.

ಪಟ್ಟಣದ ಸಂಗಮ ಹೊಟೇಲನಲ್ಲಿ ಹಮ್ಮಿಕೊಂಡ ಜೆಡಿಎಸ್ ಮತದಾರರಿಗೆ ಅಭಿನಂದನೆ ಹಾಗೂ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜನತಾದಳ ಅಧಿಕಾರದಲ್ಲಿ ಈ ಭಾಗಕ್ಕೆ ಗುತ್ತಿಬಸವಣ್ಣ ಏತನೀರಾವರಿ ಕಲ್ಪಿಸಿಕೊಟ್ಟಿದ್ದು, ಪಟ್ಟಣದಲ್ಲಿ ಕುಡಿಯುವ ನೀರಿನ ಶಾಶ್ವತ ಯೋಜನೆ ಸೇರಿದಂತೆ ಅನೇಕ ಸೌಲಭ್ಯಗಳನ್ನು ಒದಗಿಸಿಕೊಟ್ಟಿದೆ ಆದರೆ ಈ ಉಪಚುನಾವಣೆಯಲ್ಲಿ ಕೇಂದ್ರ ಹಾಗೂ ರಾಜ್ಯದಲ್ಲಿ ಅಧಿಕಾರದಲ್ಲಿರುವ ಪಕ್ಷಕ್ಕೆ ಜನತೆ ಮಣೆ ಹಾಕಿಕೊಟ್ಟಿರುವುದು ಸಹಜವೇ ಸರಿ. ರಾಜಕಾರಣದಲ್ಲಿ ಸೋಲು-ಗೆಲುವು ಸಮನಾಗಿ ಸ್ವೀಕಾರ ಮಾಡಬೇಕಾಗಿರುವುದು ಅನಿವಾರ್ಯ. ಮುಂಬರುವ ವಿಧಾನ ಪರಿಷತ್ ಚುನಾವಣೆಯಲ್ಲಿ 25 ಸ್ಥಾನಗಳಲ್ಲಿ 8 ಕ್ಷೇತ್ರಗಳಿಗೆ ಮಾತ್ರ ಜೆಡಿಎಸ್ ಪಕ್ಷದ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ ಎಂದು ರಾಜ್ಯದ ವರಿಷ್ಠರು ಹೇಳಿಕೆ ನೀಡಿದ್ದು ಅದರಲ್ಲಿ ವಿಜಯಪುರ-ಬಾಗಲಕೋಟ ಈ ಅವಳಿ ಜಿಲ್ಲೆಗೆ ಹಿಂದುಳಿದ ವರ್ಗಕ್ಕೆ ಯಾವುದೇ ಪಕ್ಷ ಟಿಕೇಟ ನೀಡಿಲ್ಲ ಆ ಕಾರಣಕ್ಕೆ ಈ ಕ್ಷೇತ್ರದಿಂದ ಬಸವರಾಜ ಯರನಾಳ ಅವರು ಆಕಾಂಕ್ಷಿಯಾಗುವುದಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದು ವರಿಷ್ಠರ ಗಮನಕ್ಕೆ ತರುವುದಾಗಿ ಹೇಳಿದ ಅವರು ಸೋತಿದ್ದರು ಕೂಡಾ ಸಂಘಟನೆಯಲ್ಲಿ ಹಿಂಜರಿಯುವುದಿಲ್ಲ ಮುಂಬರುವ 2023ರ ಸಾರ್ವತ್ರಿಕ ಚುನಾವಣೆ ಸಿದ್ದರಾಗಿ ಕಾರ್ಯಪ್ರವೃತ್ತರಾಗುತ್ತೇನೆ ಎಂದರು.

ಪುರಸಭೆ ಸದಸ್ಯ ರಾಜಣ್ಣಿ ನಾರಾಯಣಕರ ಮಾತನಾಡಿ, ಪುರಸಭೆ ಅಧ್ಯಕ್ಷ ಡಾ. ಶಾಂತವೀರ ಮನಗೂಳಿ ಅವರು ಜೆಡಿಎಸ್ ಪಕ್ಷದಿಂದ ಆಯ್ಕೆಯಾಗಿ ಈ ಉಪಚುನಾವಣೆಯಲ್ಲಿ ಕಾಂಗ್ರೆಸ ಪಕ್ಷದ ಪರವಾಗಿ ನಿಂತು ಕಾರ್ಯನಿರ್ವಹಿಸಿದ್ದು ಮಾತೃಪಕ್ಷಕ್ಕೆ ದ್ರೋಹ ಬಗೆದಂತಾಗಿದೆ ಈ ಪಕ್ಷ ವಿರೋಧಿ ನೀತಿ ಹಾಗೂ ಸದಸ್ಯರ ಜೊತೆ ಸರಿಯಾಗಿ ನಡೆದುಕೊಂಡಿಲ್ಲವೆಂದು ಅವರ ವಿರುದ್ಧ ಅವಿಶ್ವಾಸ ಮಂಡಿಸಿದ್ದೇವೆ ಮುಂದೆ ಕಾಂಗ್ರೆಸ್ ಜೊತೆ ಕೈಜೋಡಿಸಿ ಸಮ್ಮಿಶ್ರ ಅಧಿಕಾರ ನಡೆಸುತ್ತೇವೆ ಅಲ್ಲದೆ ಡಾ. ಶಾಂತವೀರ ಮನಗೂಳಿ ಅವರ ಮೇಲೆ ಶಿಸ್ತಿನ ಕ್ರಮ ಜರುಗಿಸುವಂತೆ ಪಕ್ಷದ ವರಿಷ್ಠರಲ್ಲಿ ಮನವಿ ಮಾಡಿದ್ದೇವೆ ಎಂದು ತಿಳಿಸಿದರು.

ಮಾಜಿ ಅಧ್ಯಕ್ಷ ಪ್ರಕಾಶ ಹಿರೇಕುರಬರ ಮಾತನಾಡಿ, ಜೆಡಿಎಸ್ ಪಕ್ಷಕ್ಕೆ ಪದಾಧಿಕಾರಿಗಳ ಕೊರತೆಯಿಂದ ಮತ್ತು ಸಂಘಟನೆಯ ಕೊರತೆಯಿಂದ ನಮ್ಮ ಅಭ್ಯರ್ಥಿಯ ಸೋಲಿಗೆ ಕಾರಣವಾಯಿತು ಎಂದರು.

ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಬಸವರಾಜ ಯರನಾಳ, ಸಲೀಂ ಜುಮನಾಳ ಮಾತನಾಡಿದರು.

ಈ ಪತ್ರಿಕಾಗೋಷ್ಠಿಯಲ್ಲಿ ಮಹಿಳಾ ಘಟಕದ ಅಧ್ಯಕ್ಷೆ ಅನ್ನಪೂರ್ಣ ಹೊಟಗಾರ, ಇಮಾಮಸಾಬ ನಧಾಫ್, ಶಿವಣ್ಣ ಕೊಟಾರಗಸ್ತಿ, ಎಂ.ಎನ್.ಪಾಟೀಲ, ಕೆ.ಡಿ.ಪೂಜಾರಿ, ಶರಣಪ್ಪ ಸುಲ್ಪಿ, ಜುಲ್ಪಿಕರ ಅಂಗಡಿ ವಕೀಲರು, ಶರಣಗೌಡ ಪಾಟೀಲ ಸೇರಿದಂತೆ ಅನೇಕರು ಇದ್ದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಯೇ ನನ್ನ ಪರಮ ಗುರಿ : ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ

ನಿಪ್ಪಾಣಿಯಲ್ಲಿ ಎಲ್ಲ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳನ್ನು ಉದ್ಧೇಶಿಸಿ ಪ್ರಚಾರ ಮಾಡಿದ ಲಖನ್ ನಿಪ್ಪಾಣಿ: ಜಿಲ್ಲೆಯ ಸರ್ವತೋಮುಖ ಏಳ್ಗೆಗಾಗಿ ಹಾಗೂ ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಗಾಗಿ ಸೇವೆ ಸಲ್ಲಿಸಲು ಪ್ರಥಮ ಪ್ರಾಶಸ್ತ್ಯದ...
- Advertisement -

More Articles Like This

- Advertisement -
close
error: Content is protected !!