ಮೂಡಲಗಿ: ತಾಲೂಕಿನ ಹುಣಶ್ಯಾಳ ಪಿಜಿ ಶ್ರೀ ಸಿದ್ಧಲಿಂಗ ಕೈವಲ್ಯಾಶ್ರಮದ ಪೀಠಾಧಿಪತಿಗಳಾದ ಶ್ರೀ ನಿಜಗುಣ ದೇವರ ಷಷ್ಠ್ಯಬ್ಧಿ ಸಂಭ್ರಮ ಕಾರ್ಯಕ್ರಮಕ್ಕೆ ಬರುವ ಮಹ್ಮಾತರು ತೃಪ್ತಿ ಹೊಂದಿದರೆ ಈ ಭಾಗ ಸಮೃದ್ಧಿಯಾಗುತ್ತದೆ. ಕಾರ್ಯಕ್ರಮಕ್ಕೆ ಎಲ್ಲ ಸಂಪ್ರದಾಯದ ಸ್ವಾಮೀಜಿಗಳು ಬಂದು ಈ ಭಾಗಕ್ಕೆ ಆರ್ಶಿವಾದ ನೀಡುತ್ತಾರೆ ಎಂದು ಹುಕ್ಕೇರಿಯ ಗುರುಶಾಂತೇಶ್ವರ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು.
ಬರುವ ಜನವರಿ 1 ರಿಂದ 3 ರವರೆಗೆ ಮೂರು ದಿನಗಳ ಕಾಲ ನಡೆಯುವ ಮೂಡಲಗಿ ತಾಲೂಕಿನ ಹುಣಶ್ಯಾಳ ಪಿಜಿಯ ಸಿದ್ಧಲಿಂಗ ಕೈವಲ್ಯಾಶ್ರಮದ ಶ್ರೀ ನಿಜಗುಣ ದೇವರ ಷಷ್ಠ್ಯಬ್ಧಿ ಸಂಭ್ರಮದ ಕಾರ್ಯಕ್ರಮದ ಪ್ರಚಾರ ಪತ್ರಿಕೆಯನ್ನು ಶ್ರೀ ಸಿದ್ಧಲಿಂಗ ಕೈವಲ್ಯಾಶ್ರಮದಲ್ಲಿ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಶ್ರೀ ನಿಜಗುಣ ದೇವರ 60ನೇ ವರ್ಷದ ಷಷ್ಠ್ಯಬ್ಧಿ ಸಂಭ್ರಮ ಅನ್ನುವುದು ಒಂದು ನೆಪ ಮಾತ್ರ, ಕಾರ್ಯಕ್ರಮ ಮಾಡಿ ಮಹಾತ್ಮರ ಆಶೀರ್ವಾದ ಪಡೆಯುವುದೇ ಒಂದು ಕಾರ್ಯಕ್ರಮದ ಉದ್ಧೇಶವಾಗಿರುತ್ತದೆ. ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಯಶಸ್ವಿಯಾಗಿಸಲು ಈ ಭಾಗದ ಶಾಸಕ ಬಾಲಚಂದ್ರ ಜಾರಕಿಹೊಳಿಯವರು ಸಹ ಸಹಾಯ ಹಸ್ತ ಚಾಚುವ ಮೂಲಕ ಸನ್ನದ್ಧರಾಗಿದ್ದಾರೆ ಈ ಭಾಗದ ಭಕ್ತರು ಕೂಡಾ ಕಾರ್ಯಕ್ರಮದ ಯಶಸ್ವಿಗೆ ಸಾಕ್ಷಿಯಾಗುತ್ತೀರಿ ಎಂದರು.
ಕಾರ್ಯಕ್ರಮದ ಉಸ್ತುವಾರಿ ಸಮಿತಿ ಅಧ್ಯಕ್ಷ ಸರ್ಮೋತ್ತಮ ಜಾರಕಿಹೊಳಿ ಮಾತನಾಡಿ, ಹುಣಶ್ಯಾಳ ಪಿಜಿ ಗ್ರಾಮದಲ್ಲಿ ನಡೆಯುತ್ತಿರುವ ಶ್ರೀ ಸಿದ್ಧಲಿಂಗ ಕೈವಲ್ಯಾಶ್ರಮದ ಪೀಠಾಧಿಕಾರಿಗಳಾದ ಶ್ರೀ ನಿಜಗುಣ ದೇವರ ಷಷ್ಠ್ಯಬ್ಧಿ ಸಂಭ್ರಮ ಕಾರ್ಯಕ್ರಮಕ್ಕೆ ನಾಡಿನಾದ್ಯಂತ ಪೂಜ್ಯರು ಆಗಮಿಸುತ್ತಿದ್ದು, ಅವರ ಅತಿಥಿ ಸತ್ಕಾರದಲ್ಲಿ ಯಾವುದೇ ತೊಂದರೆಗಳು ಆಗದಂತೆ ಯುವಕರು ಹಾಗೂ ಹಿರಿಯರು ಸೇರಿ ಈ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಮಾಡೋಣ ಆ ನಿಟ್ಟಿನಲ್ಲಿ ಎಲ್ಲ ಸೇರಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸೋಣ ಎಂದರು.
ರಾಯಬಾಗದ ಮಾಜಿ ಶಾಸಕ ಬಿ.ಸಿ.ಸರಿಕರ ಶ್ರೀ ನಿಜಗುಣ ದೇವರ ಷಷ್ಠ್ಯಬ್ಧಿ ಸಂಭ್ರಮದಲ್ಲಿ ಸುಮಾರು 150 ನಾಡಿನ ವಿವಿಧ ಮಠಾಧೀಶರು ಭಾಗವಹಿಸುವ ಮಠಾಧೀಶರ ದರ್ಶನ ಪಡೆಯುತ್ತಿರುವ ಶ್ರೀ ಮಠದ ಭಕ್ತರು ಪುಣ್ಯವಂತರು ಎಂದ ಅವರು ಶ್ರೀಗಳ ಷಷ್ಠ್ಯಬ್ಧಿ ಸಂಭ್ರಮವನ್ನು ಯಶಸ್ವಿಗೊಳಿಸಲು ತನು-ಮನದಿಂದ ಸಹಾಯ ಸಹಾರ ಸಲ್ಲಿಸುವದಾಗಿ ಹೇಳಿದರು.
ಈ ಸಂದರ್ಭದಲ್ಲಿ ಷಷ್ಠ್ಯಬ್ಧಿ ಸಂಭ್ರಮದ ಶ್ರೀಗಳ ಮೆರವಣಿಗೆಯಲ್ಲಿ 1008 ಕುಂಭ ಮೇಳದ ಜವಾಬ್ದಾರಿಯನ್ನು ಆಶಾ ಕಾರ್ಯಕರ್ತೆಯರಿಗೆ ವಹಿಸಲಾಯಿತು ಹಾಗೂ ಕಾರ್ಯಕ್ರಮದ ಸಿದ್ದತೆ ಮತ್ತು ರೂಪರೇಷೆಗಳ ಬಗ್ಗೆ ಚರ್ಚಿಸಿ ಸ್ವಾಮೀಜಿಗಳು ವಿವಿಧ ಗ್ರಾಮಗಳಿಗೆ ಭೇಟಿಯ ದಿನಾಂಕವನ್ನು ನಿಗದಿ ಪಡಿಸಲಾಯಿತು.
ಸಭೆಯಲ್ಲಿ ನೇಸರಗಿಯ ಗಾಳೇಶ್ವರ ಮಠದ ಚಿದಾನಂದ ಮಹಾಸ್ವಾಮೀಜಿ, ಶ್ರೀಮಠದ ನಿಜಗುಣ ದೇವರು, ತೊಂಡಿಕಟ್ಟಿ ಗಾಳೇಶ್ವರ ಮಠದ ಶ್ರೀ ವೆಂಕಟೇಶ್ವರ ಮಹಾರಾಜರು, ಮುಖಂಡರಾದ ಅಶೋಕ ಪೂಜೇರಿ, ಜಿಪಂ ಮಾಜಿ ಅಧ್ಯಕ್ಷ ಬಸಗೌಡ ಪಾಟೀಲ ಎಮ್.ಆರ್.ಬೋವಿ, ಶಂಕರ ಬಿಲಕುಂದಿ, ವಿಠ್ಠಲ ಬಿಲಕುಂದಿ, ಸಿದ್ದಲಿಂಗ ಕಂಬಳಿ, ರಾಜು ಬೈರುಗೋಳ, ರವಿ ಪರುಶೆಟ್ಟಿ, ಎಸ್.ಬಿ.ಲೋಕನ್ನವರ, ರಾಮಣ್ಣ ಹುಕ್ಕೇರಿ, ರಾಮನಾಯ್ಕ ನಾಯ್ಕ, ಬಸವರಾಜ ಕಾಡಾಪೂರ, ಶಾಮಾನಂದ ಪೂಜೇರಿ ಸೇರಿದಂತೆ ವಿವಿಧ ಗ್ರಾಮಗಳಿಂದ ಶ್ರೀಮಠದ ಅಪಾರ ಭಕ್ತ ಸಮೂಹ ಮತ್ತು ಗ್ರಾಮದ ಭಕ್ತರು, ಮುಖಂಡರು ಉಪಸ್ಥಿತರಿದ್ದರು.