spot_img
spot_img

ಸರಕಾರ ಕೂಡಲೇ ಜಾತಿ ಗಣತಿ ವರದಿಯನ್ನು ಅಂಗೀಕರಿಸಿ ಬಿಡುಗಡೆಗೊಳಿಸಬೇಕು -ಕಟ್ಟಿಕಾರ

Must Read

spot_img
- Advertisement -

ಮೂಡಲಗಿ: ಕರ್ನಾಟಕ ಸರ್ಕಾರ ನಡೆಸಿರುವ ಜಾತಿ ಗಣತಿ ವರದಿಯನ್ನು ಅಂಗೀಕರಿಸಿ, ಬಿಡುಗಡೆಗೊಳಿಸಿ,

ರಾಜ್ಯದ ಜನಸಂಖ್ಯೆಯಲ್ಲಿ ಶೇ. 85%ರಷ್ಟಿರುವ ಅಲ್ಪಸಂಖ್ಯಾತ- ಹಿಂದುಳಿದ- ದಲಿತ (ಅಹಿಂದ) ವರ್ಗಗಳಿಗೆ ಆಗುತ್ತಿರುವ ಅನ್ಯಾಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸರಿಪಡಿಸ ಬೇಕು ಎಂದು ಅಹಿಂದ ಚೇತನ ಕರ್ನಾಟಕ ಸಂಘಟನೆಯ ರಾಜ್ಯಾಧ್ಯಕ್ಷ ವಿನಾಯಕ  ಕಟ್ಟಿಕಾರ ಆಗ್ರಹಿಸಿದರು. 

ರವಿವಾರದಂದು ಮೂಡಲಗಿ ಪತ್ರಿಕಾ ಕಛೇರಿಯಲ್ಲಿ ಕರೆದ ಪ್ರತಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು 

- Advertisement -

2016ರಲ್ಲಿ  ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ನಡೆಸಿರುವ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆಯನ್ನು 180 ಕೋಟಿಗಳನ್ನು ವ್ಯಯಿಸಿ ನಡೆಸಿದ್ದ ಸಮೀಕ್ಷೆ ನಡೆದು 5 ವರ್ಷಗಳಾಗುತ್ತಿದೆ ಸಚಿವ ಸಂಪುಟದ ತಮ್ಮ ತಮ್ಮ ಜಾತಿಗಳ ಬಗ್ಗೆ ಮಾಹಿತಿಗಳನ್ನು ನೀಡಿರುತ್ತಾರೆ. ಆದರೆ ಸಮೀಕ್ಷೆ ನಡೆಸಿ 5 ವರ್ಷಗಳು ಕಳೆದರೂ ಇದುವರೆವಿಗೂ ವರದಿ ಬಿಡುಗಡೆಗೆ ಸರ್ಕಾರಗಳು ಬಿಡುಗಡೆ ಮಾಡದಿರುವುದು ವಿಪರ್ಯಾಸವಾಗಿದೆ.

ಸಾಮಾಜಿಕ ಶೈಕ್ಷಣಿಕ, ಆರ್ಥಿಕ ಸಮೀಕ್ಷೆ ಅಥವಾ ಜಾತಿ ಗಣತಿಯ ಬಿಡುಗಡೆಗೊಳಿಸುವುದರಿಂದ ಜಾತಿಗಳ ಜನಸಂಖ್ಯೆ, ಸಾಮಾಜಿಕ ಶೈಕ್ಷಣಿಕ, ಆರ್ಥಿಕ ಮತ್ತು ರಾಜಕೀಯ ಸ್ಥಿತಿಗತಿಗಳ ಬಗ್ಗೆ ರಾಜ್ಯದ ಜನರು ತಿಳಿಯಬೇಕಿದೆ. ಮುಖ್ಯವಾಗಿ ಪ್ರತಿ ಜಿಲ್ಲೆ, ತಾಲ್ಲೂಕು ಹಾಗೂ 224 ವಿಧಾನಸಭಾ ಕ್ಷೇತ್ರದಲ್ಲಿಯೂ ರಾಜ್ಯದ ಒಟ್ಟು ಜನಸಂಖ್ಯೆಯ ಶೇ.85 ರಷ್ಟು ಅಲ್ಪಸಂಖ್ಯಾತ, ಹಿಂದುಳಿದ, ದಲಿತ ಸಮುದಾಯಗಳಿವೆ ಈ ಸಮುದಾಯಗಳಿಗೆ ಸಿಗಬೇಕಾಗಿರುವ ಹಕ್ಕುಗಳು, ರಾಜಕೀಯ ಸ್ಥಾನಮಾನಗಳು ಸಿಗುತ್ತಿಲ್ಲ. ಸಮೀಕ್ಷೆ ಕದ್ದುಮುಚ್ಚಿ ಮಾಡಿರಲಿಲ್ಲ ಹಾಗೂ ಸಮೀಕ್ಷೆಯನ್ನು ಸರ್ಕಾರಿ ಇಲಾಖೆಯವರು ಮಾಡಿರುವಂತದ್ದು ಗಣತಿದಾರರಲ್ಲಿ ಎಲ್ಲಾ ಜಾತಿಯವರು ತೊಡಗಿಸಿಕೊಂಡಿದ್ದರು. ಗಣತಿಯ ಬಿಡುಗಡೆಗೊಳಿಸಬೇಕಾದುದು ಸರ್ಕಾರದ ಕರ್ತವ್ಯ. ಜನರ ತೆರಿಗೆ ಹಣದಿಂದ ಸಮೀಕ್ಷೆ ಮಾಡಲಾಗಿದೆ. ಆ ಹಣ ವ್ಯರ್ಥವಾಗದಂತೆ ಮುಖ್ಯಮಂತ್ರಿಗಳು ಕೂಡಲೇ ಸಮೀಕ್ಷಾ ವರದಿಯನ್ನು ಬಿಡುಗಡೆಗೊಳಿಸಬೇಕೆಂದು ವಿನಾಯಕ  ಕಟ್ಟಿಕಾರ ಆಗ್ರಹಿಸಿದರು.

ಈ ಸಂಧರ್ಭದಲ್ಲಿ ಡಿ.ಎಸ್.ಎಸ್ ಮುಖಂಡ ರಮೇಶ ಸಣ್ಣಕ್ಕಿ, ಪ್ರದೇಶ ಕುರಬರ ಸಂಘದ ಮೂಡಲಗಿ ತಾಲೂಕಾ ಅಧ್ಯಕ್ಷ ಡಾ.ಎಸ್.ಎಸ್.ಪಾಟೀಲ, ಮುಸ್ಲಿಂ ಸಮಾಜದ ಮುಖಂಡ ಲಾಲಸಾಬ ಸಿದ್ದಾಪೂರ ಮಾತನಾಡಿ, ಸರಕಾರ ಕೂಡಲೇ ಜಾತಿ ಗಣತಿ ವರದಿಯನ್ನು ಅಂಗೀಕರಿಸಿ, ಬಿಡುಗಡೆಗೊಳಿಸ ಬೇಕು ಇಲ್ಲವಾದರೆ ಅಹಿಂದ ಚೇತನ ಕರ್ನಾಟಕ ಸಂಘಟನೆಯು ಹಮ್ಮಿಕೊಳ್ಳುವ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲ ಇದೆ ಎಂದರು. 

- Advertisement -

ಪತ್ರಿಕಾಗೋಷ್ಠಿಯಲ್ಲಿ ದಲಿತ ಮುಖಂಡ ಮರೆಪ್ಪ ಮರೆಪ್ಪಗೋಳ,ಶಾಬಪ್ಪ ಸಣ್ಣಕ್ಕಿ, ಉಪ್ಪಾರ ಸಮಾಜದ ಈಶ್ವರ ಕಂಕಣವಾಡಿ, ವಿಠ್ಠಲ ಮಲಗೌಡರ, ಮುಸ್ಲಿಂ ಸಮಾಜ ಮುಖಂಡರಾದ ಅಜೀಜ ಡಾಂಗೆ, ಮಲಿಕ ಹುಣಶ್ಯಾಳ, ಇಸ್ಮೈಲ್ ಇನಾಮದಾರ ಹಾಗೂ ಸಿದ್ದು ಮರಡಿ, ಬಸವರಾಜ ಸರವರ ಉಪಸ್ಥಿತರಿದ್ದರು.

- Advertisement -
- Advertisement -

Latest News

ಕವನ: ಕಲೆಯ ಲೀಲೆ

"ಕಲೆಯ ಲೀಲೆ" ಲೀಲಾವತಿ ಎಂದರೆ ಕಲೆಯ ಕಡಲು ನಟನೆಯಲ್ಲಿ ಕೈಗೆಟುಕದ ಮುಗಿಲು ಮರೆಯದ ಕಲಾವಿದೆ ಇವರು ಮರೆತರು ಇವರ ಇವರಿಂದ ಬೆಳೆದವರು ಸಾರುತ್ತಿದ್ದವು ಮೌಲ್ಯ ಇವರ ಚಿತ್ರಗಳು ಕಲಿಸುತ್ತಿದ್ದವು ಪಾಠ ಇವರ ಹಾಡುಗಳು ಜೀವನವೇ ಇರುತ್ತಿತ್ತು ಇವರ ಸಿನಿಮಾದಲ್ಲಿ ಬದುಕುತ್ತಿದ್ದರು ಸಿನಿಮಾದಂತೆ ಜನರು ಜೀವನದಲ್ಲಿ ಬಡವಾಯಿತು ಸಿನಿಮನೆ ಹಿರಿಯ ಕಲೆ ತಲೆಗಳಿಲ್ಲದೆ ಚಿತ್ರರಂಗ ಸಾಗಿದೆ ಕಲೆ...
- Advertisement -

More Articles Like This

- Advertisement -
close
error: Content is protected !!
Join WhatsApp Group