ಸವದತ್ತಿ : ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಯ ಶಿಕ್ಷಕಿ ಅನಸೂಯಾ ಶಂಕರಪ್ಪ ಮದನಬಾವಿಯವರಿಗೆ ಕರ್ನಾಟಕ ರಾಜ್ಯ ಮಹಿಳಾ ನೌಕರರ ಸಂಘದ ಆಶ್ರಯದಲ್ಲಿ ಕಲಬುರಗಿ ಯಲ್ಲಿ ಜರಗುತ್ತಿರುವ ರಾಜ್ಯ ಮಟ್ಟದ ಮಹಿಳಾ ದಿನಾಚರಣೆ ಅಂಗವಾಗಿ ರಾಣಿ ಅಬ್ಬಕ್ಕ ದೇವಿ ಪ್ರಶಸ್ತಿ ಗೌರವ ಲಭಿಸಿದೆ ಎಂದು ಕಲಬುರಗಿ ಜಿಲ್ಲೆಯ ಮಹಿಳಾ ನೌಕರರ ಸಂಘದ ಅಧ್ಯಕ್ಷೆ ನಂದಿನಿ ಸನಬಾಳ್ ಪ್ರಕಟಣೆಯಲ್ಲಿ ತಿಳಿಸಿರುವರು.
ಫೆಬ್ರವರಿ 9 ರಂದು ಕಲಬುರಗಿಯ ಪೂಜ್ಯ ಅಪ್ಪ ಮೆಮೋರಿಯಲ್ ಹಾಲ್ ನಲ್ಲಿ ಜರುಗುವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ