ಮೂಡಲಗಿ– ಅಥಣಿಯಿಂದ ಬೆಂಗಳೂರಿಗೆ ಹೋಗುವ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಲಕ್ಝುರಿ ಬಸ್ಸಿನ ಲಗ್ಗೇಜ ಇಡುವ ಸ್ಥಳದಲ್ಲಿ ಗಲೀಜು ತುಂಬಿಕೊಂಡಿದ್ದು ಪ್ರಯಾಣಿಕರ ಲಗ್ಗೇಜುಗಳು ಹೊಲಸಾಗಿವೆ.
ದಿ. ೨೩ ರಂದು ಸಂಜೆ ೭.೩೦ ಕ್ಕೆ ಮೂಡಲಗಿಗೆ ಬರುವ ಅಥಣಿ – ಬೆಂಗಳೂರು ಲಕ್ಝುರಿ ಬಸ್ ( ನಂ. ಕೆಎ ೨೩ಎಫ್೧೦೧೬) ನಲ್ಲಿ ಇಡಲಾಗಿದ್ದ ಲಗ್ಗೇಜುಗಳು ಬೆಳಿಗ್ಗೆ ನೋಡಿದಾಗ ಅಲ್ಲಲ್ಲಿ ಗ್ರೀಸು ಧೂಳು ಮೆತ್ತಿಕೊಂಡು ಹೊಲಸಾಗಿದ್ದವು. ಇಂಥ ಬ್ಯಾಗ್ ಗಳನ್ನು ತೆಗೆದುಕೊಂಡು ಹೊರದೇಶಕ್ಕೆ ಹೋಗಬೇಕಾದವರು ಹೇಗೆ ಹೋಗಬೇಕು?
ಐಷಾರಾಮಿ ಬಸ್ ಗಳೆಂದರೆ ಸ್ವಚ್ಛತೆಗೆ ಆದ್ಯತೆ ಕೊಟ್ಟಿರಬೇಕಾಗುತ್ತದೆ. ಆದರೆ ವಾಕರಸಾ ಸಂಸ್ಥೆಯ ಈ ಬಸ್ ನಲ್ಲಿ ಸ್ವಚ್ಛತೆ ಕಣ್ಮರೆಯಾಗಿದೆ. ಒಳ್ಳೆಯ ಸೇವೆಗೆ ಹೆಸರಾಗಿರುವ ರಾಜ್ಯ ಸಾರಿಗೆ ಇಲಾಖೆ ಬಸ್ ಗಳ ಸ್ವಚ್ಛತೆಯ ಕಡೆಗೂ ಗಮನಹರಿಸಬೇಕಾದ ಅಗತ್ಯವಿದೆ.