ಮುನಿರತ್ನ ಅವರೇ ಇತ್ತ ನೋಡಿ !
ಬೆಂಗಳೂರು: ನಗರದಲ್ಲಿ ಕಳೆದ ಅನೇಕ ದಿನಗಳಿಂದ ರಾಜ ರಾಜೇಶ್ವರಿ ನಗರದ ಮೆಟ್ರೋ ನಿಲ್ದಾಣ ದಿಂದ ಕೂಗಳತೆ ದೂರದಲ್ಲಿ ಇರುವ ಪಾದಚಾರಿ ಮಾರ್ಗದ ಮೇಲೆ ಅನಾಥವಾಗಿ ಒಂದು ದೊಡ್ಡ ಕಂಬ ಬಿದಿದ್ದು, ಇತ್ತ ಪಾದಚಾರಿ ಮಾರ್ಗವು ಇಲ್ಲದೆ , ಅತ್ತ ರಸ್ತೆಯ ತುಂಬಾ ವಾಹನಗಳ ದಟ್ಟಣೆಯ ನಡುವೆ ಕೆಲಸಕ್ಕೆ ಹೋಗುವ ಜನರು ಹಾಗು ಶಾಲಾ – ಕಾಲೇಜು ಗಳಿಗೆ ಹೋಗುವ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರು ಅನಾಥವಾಗಿ ಬಿದ್ದಿರುವ ಕಂಬ ನೋಡಿ ಹಿಡಿ ಶಾಪ ಹಾಕುತ್ತ ಸಾಗುತ್ತಿದ್ದಾರೆ.
ರಾಜಕೀಯ ಪಕ್ಷಗಳ ಮುಖಂಡರು ಬಿ . ಬಿ.ಎಂ .ಪಿ ಅಧಿಕಾರಿಗಳು ಹಾಗು ಕ್ಷೇತ್ರದ ಶಾಸಕ ಹಾಗು ಸಚಿವರಾದ ಮುನಿರತ್ನ ಅವರು ಎಲ್ಲಿದ್ದಾರೋ ಏನೋ…ಇತ್ತ ಪಾದಚಾರಿಗಳಿಗೆ ಮಾರ್ಗವಿದ್ದೂ ಇಲ್ಲದಂತಾಗಿದ್ದರೆ ಅತ್ತ ಬಿ.ಬಿ.ಎಂ .ಪಿ ಹಾಗು ಬೆಸ್ಕಾಂ ಅಧಿಕಾರಿಗಳು ಮಾತ್ರ ಜಾಣ ಕುರುಡು ಪ್ರದರ್ಶನ ಮಾಡುತ್ತಾ ಇರುವುದು ವಿಪರ್ಯಾಸವೇ ಸರಿ ಅಲ್ಲವೇ ?
ಸ್ಥಳೀಯರ ದೂರು:
ರಾಜರಾಜೇಶ್ವರಿ ನಗರದ ಕಮಾನು ಮುಂಭಾಗದಲ್ಲಿ ನಾಗರಿಕರಿಗೆ ಪಾದಚಾರಿ ಮಾರ್ಗ ದಲ್ಲಿ ನಡೆದು ಹೋಗಲು ಲಅವಕಾಶ ಇಲ್ಲದೆ ಓಡಾಡಲು ಕಷ್ಟಪಟ್ಟು ಸಾಗುತ್ತಿದ್ದಾರೆ ಆದರೆ ಸಂಬಂಧ ಪಟ್ಟ ಬಿ.ಬಿ.ಎಂ.ಪಿ ಇಲಾಖೆ ಅಧಿಕಾರಿಗಳು ಮಾತ್ರ ತಮಗೆ ಸಂಬಂಧವೆ ಇಲ್ಲ ಅನ್ನುವ ಹಾಗೇ ಇದ್ದಾರೆ ಎಂಬುದು ಸ್ಥಳೀಯರ ದೂರು.
ಮುಂದಿನ ಚುನಾವಣಾ ತಯಾರಿಯಲ್ಲಿ ಬಿ,ಬಿ.ಎಂ .ಪಿ – ರಾಜ್ಯ ಸರ್ಕಾರ?
ಪ್ರಾಯಶಃ ಮುಂಬರುವ ಬಿ.ಬಿ,ಎಂ .ಪಿ ಚುನಾವಣಾ ತಯಾರಿಯಲ್ಲಿ ಬಿ,ಬಿ.ಎಂ .ಪಿ ಸಂಪೂರ್ಣವಾಗಿ ಬ್ಯುಸಿ ಆಗಿರಬಹುದು. ರಾಜ್ಯ ಸರ್ಕಾರ ಕೂಡ ಮುಂದಿನ ಚುನಾವಣೆಯ ಮತ ಲೆಕ್ಕ ಹಾಕುವುದರಲ್ಲಿ ಬ್ಯುಸಿ ಆಗಿರಬಹುದು , ಆದರೆ ಪಾದಚಾರಿ ಮಾರ್ಗವಿದ್ದರೂ ಪಾದಚಾರಿಗಳು ರಸ್ತೆಯ ಮಧ್ಯದಲ್ಲಿ ಸಾಗುವ ಪರಿಸ್ಥಿತಿ ನಿರ್ಮಾಣವಾಗಿದೆ ಆರ್ ಆರ್. ನಗರದಲ್ಲಿ ಹೆಚ್ಚಿನ ವಾಹನ ದಟ್ಟಣೆ ಇರುವ ಈ ಸ್ಥಳದಲ್ಲಿ ಅಪಘಾತ ಸಂಭವಿಸುವ ಮುನ್ನ ಬಿ,ಬಿ,ಎಂ.ಪಿ ಹಾಗು ರಾಜ್ಯ ಸರ್ಕಾರ ಎಚ್ಚೆತುಕೊಳ್ಳಲಿ ಎಂದು ಆಶಿಸೋಣ.
ಮೊದಲೇ ರಸ್ತೆ ಗುಂಡಿಗಳಿಂದಾಗಿ ಅಪಖ್ಯಾತಿಗೆ ಒಳಗಾಗಿರುವ ಬಿಬಿಎಂಪಿ ಪಾದಚಾರಿಗಳಿಗೂ ಕಂಟಕವಾಗಿ ಪರಿಣಮಿಸಿದ್ದು ಹೆಚ್ಚಿನ ಅನಾಗುತಗಳಾಗುವ ಮೊದಲೇ ಎಚ್ಚತ್ತುಕೊಳ್ಳುವ ಅಗತ್ಯವಿದೆ.
ಚಿತ್ರ: ವರದಿ: ತೀರ್ಥಹಳ್ಳಿ ಅನಂತ ಕಲ್ಲಾಪುರ , ಬೆಂಗಳೂರು