spot_img
spot_img

ಪದ್ಮ ಭೂಷಣ ಪಂ. ಪುಟ್ಟರಾಜ ಗವಾಯಿಗಳ ೧೦೮ನೆಯ ಜಯಂತ್ಯುತ್ಸವದ ಅಂಗವಾಗಿ ಗಾನನಮನ

Must Read

spot_img
- Advertisement -

ಬೆಳಗಾವಿ: ಭಾರತಕಂಡ ಶ್ರೇಷ್ಠ ಮಾನವತಾವಾದಿ, ಮನುಕುಲದ ಬೆಳಕು, ಅಂಧಮಕ್ಕಳ ತಂದೆ, ಪದ್ಮ ಭೂಷಣ ಪಂ. ಪುಟ್ಟರಾಜ ಗವಾಯಿಗಳವರು ಎಂದೆಂದಿಗೂ ಪ್ರಾಥಸ್ಮರಣೀಯರು. ಕನ್ನಡ ನಾಡಿನ ಸಂಗೀತ ಮತ್ತು ಸಾಹಿತ್ಯ ಲೋಕಕ್ಕೆ ಅವರು ನೀಡಿದ ಕೊಡುಗೆ ಚಿರಸ್ಮರಣೀಯ. ಅವರ ಶಿಷ್ಯಬಳಗ ಇಂದು ಬೆಳಗಾವಿಯಲ್ಲಿ ಇಂದು ಅವರ ೧೦೮ನೆಯ ಜಯಂತ್ಯುತ್ಸವವನ್ನು ಭಾರತೀಯ ಗಾಯನ ಸಮಾಜವು ಆಚರಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ ಸಂಗತಿ. ಇಂತಹ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವ ವಿದುಷಿ ರೋಹಿಣಿ ಅವರು ಅಭಿನಂದನೀಯರು ಎಂದು ಬೆಳಗಾವಿಯ ರಾಜ್ಯ ಜಾನಪದ ಅಕಾಡೆಮಿಯ ‘ಜಾನಪದ ಕಲಾಶ್ರೀ’ ಪ್ರಶಸ್ತಿ ವಿಜೇತೆ ರುದ್ರಮ್ಮ ಯಾಳಗಿ ಅಭಿಪ್ರಾಯಪಟ್ಟರು. ಅವರು ದಿನಾಂಕ ೨೬.೦೩೨೦೨೨ರಂದು ಭಾರತೀಯ ಗಾಯನ ಸಮಾಜದ ವತಿಯಿಂದ ವಿದುಷಿ ರೊಹಿಣಿ ಅವರ ಶಿಷ್ಯಬಳಗವು ಶಿವಬಸವ ನಗರದ ಭಾರತೀಯ ಗಾಯನ ಸಮಾಜದ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪದ್ಮ ಭೂಷಣ ಪಂ. ಪುಟ್ಟರಾಜ ಗವಾಯಿಗಳ ೧೦೮ನೆಯ ಜಂಯಂತ್ಯುತ್ಸವದ ಅಂಗವಾಗಿ ಗಾನನಮನ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಅಧ್ಯಕ್ಷತೆವಹಿಸಿದ್ದ ಗಾಯನ ಸಮಾಜದ ಅಧ್ಯಕ್ಷರಾದ ವಿದುಷಿ ರೋಹಿಣಿಯವರು ಪಂ ಪುಟ್ಟರಾಜ ಗವಾಯಿಗಳು ಈ ನೆಲದ ಶಕ್ತಿ. ಅವರು ಅಜರಾಮರರು. ನಮ್ಮಂತಹ ಸಾವಿರಾರು ಸಂಗೀತಗಾರರಿಗೆ ದೈವೀ ಪ್ರೇರಣೆ ತುಂಬಿದ ಅಧ್ಯಾತ್ಮವಾದಿಗಳು ಮಾತ್ರವಲ್ಲ ಉಭಯ ಸಂಗೀತವಿಶಾರದರು. ಕವಿಗಳು, ನಾಟಕಕಾರರು, ವಾಗ್ಗೇಯಕಾರರು ಎಂದು ಅಭಿಪ್ರಾಯಪಟ್ಟರು. ಪಂ. ಪುಟ್ಟರಾಜ ಗವಾಯಿಗಳ ಕುರಿತು ಉಪನ್ಯಾಸ ನೀಡಿದ ಶ್ರೀ ಮಹಾಂತೇಶ ನರಸಣ್ಣನವರು ಅಸಾಧಾರಣ ಕವಿತ್ವ, ಅಪ್ರತಿಮ ಸಂಗೀತ, ಮಾನವೀಯ ಮಿಡಿತಗಳಿಂದ ತುಂಬಿದ್ದ ಅವರ ಅಂತಃಕರಣ ಅನುಕರಣೀಯವಾದದ್ದು. ಅವರಿಗೆ ಅರ್ಪಿಸಿದ ತುಲಾಭಾರ ದ್ರವ್ಯವು ಗಿನ್ನಿಸ್ ದಾಖಲೆಯಾದದ್ದು ಇಲ್ಲಿ ಸ್ಮರಣೀಯ ಎಂದರು.

ವಿದುಷಿ ರೋಹಿಣಿ ಅವರ ಶಿಷ್ಯ ತಂಡಗಳು ಸ್ವರನಮನವನ್ನು ಸಲ್ಲಿಸಿದವು ಪಂ. ಸತೀಶ ಗಚ್ಚಿ ಹಾಗೂ ಶರಣಪ್ಪ ಅವರು ತಬಲಾ ಸಾಥ್ ನೀಡಿದರು. ವೇದಿಕೆಯ ಮೇಲೆ ಸುಜಾತ ವಸ್ತçದ್, ದಾಕ್ಷಾಯಿಣಿ ಹೂಗಾರ, ಶಾರದಾ ಗೌಡರ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಜಾನಪದ ಕಲಾಶ್ರೀ ಪ್ರಶಸ್ತಿ ಪುರಸ್ಕೃತರಾದ ರುದ್ರಮ್ಮ ಯಾಳಗಿ ಅವರನ್ನು ಸನ್ಮಾನಿಸಲಾಯಿತು.

- Advertisement -
- Advertisement -

Latest News

ವಿಶ್ವ ಶಾಂತಿಗೆ ಕುವೆಂಪು ಚಿಂತನೆಗಳೇ ದಾರಿದೀಪ : ಡಾ. ಭೇರ್ಯ ರಾಮಕುಮಾರ್

ಇಂದು ವಿಶ್ವವನ್ನು ಕಾಡುತ್ತಿರುವ ಹಿಂಸೆ, ಭಯೋತ್ಪಾದನೆ, ಯುದ್ಧಗಳ ನಿವಾರಣೆಗೆ ರಾಷ್ಟ್ರಕವಿ ಕುವೆಂಪು ಅವರ ವಿಶ್ವಮಾನವ ತತ್ವವೊಂದೇ ಪರಿಹಾರ ಎಂದು ಕನ್ನಡ ಸಾಹಿತ್ಯ ಪರಿಷತ್ ದತ್ತಿ ಪ್ರಶಸ್ತಿ...
- Advertisement -

More Articles Like This

- Advertisement -
close
error: Content is protected !!
Join WhatsApp Group