spot_img
spot_img

ಜನಪ್ರತಿನಿಧಿಗಳು ಜನಸಾಮಾನ್ಯರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸಬೇಕು

Must Read

- Advertisement -

ಸಿಂದಗಿ: ಜನಪ್ರತಿನಿಧಿಗಳಾದವರು  ಬರೀ ಚುನಾವಣೆಗಳು ಬಂದಾಗ ಮಾತ್ರ ಸಾರ್ವಜನಿಕರನ್ನು ಕಾಣದೇ ನಿತ್ಯ ಜೀವನದ ಅವರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸಬೇಕು ಮನಗೂಳಿ ಮನೆತನ 40 ವರ್ಷದ ರಾಜಕಾರಣದಲ್ಲಿ ಏಳು ಬೀಳು ಕಂಡರೂ ಕೂಡಾ ಯವುದೇ ಕಾರಣಕ್ಕೆ  ಆ ತಪ್ಪು ಮಾಡಿಲ್ಲ ಅಧಿಕಾರ ಬರುತ್ತೇ ಹೋಗುತ್ತೇ ಆದರೆ ನಾವು ನಿವೆಲ್ಲ ನಿತ್ಯ ಒಡನಾಟ ಹೊಂದುವುದು ಮುಖ್ಯವಾಗಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.

ಪಟ್ಟಣದ ಡಾ. ಅಂಬೇಡ್ಕರ ವೃತ್ತದಲ್ಲಿ ಅಟೋ ಚಾಲಕರ ಮತ್ತು ಮಾಲೀಕರ ಸಂಘದವತಿಯಿಂದ ಹಮ್ಮಿಕೊಂಡ ನೂತನವಾಗಿ ನಿರ್ಮಾಣಗೊಂಡ ಡಾ. ಅಂಬೇಡ್ಕರ ಅಟೋ ನಿಲ್ದಾಣವನ್ನು ಉದ್ಘಾಟಿಸಿ ಮಾತನಾಡಿ, ಆಟೋ ಖರೀದಿಗೆ ಬ್ಯಾಂಕ ಸಹಕಾರವಿದ್ದರೆ ಕಲ್ಪಿಸುವದಾಗಿ, ಅಲ್ಲದೆ ಮನೆ ಇಲ್ಲದವರಿಗೆ ಸೂರು ಕಲ್ಪಿಸುವ ಮತ್ತು ಅಟೋ ಚಾಲಕರ ಮಕ್ಕಳು ಓದುವ ಸರಕಾರಿ ಶಾಲೆಗಳ ಜೀರ್ಣೋದ್ದಾರಕ್ಕೆ ಮುಂದಾಗುವೆ. ಪಟ್ಟಣದ ಚಿಕ್ಕಸಿಂದಗಿ ಬೈಪಾಸ್ ನಿಂದ ಬಸವೇಶ್ವರ ವೃತ್ತ, ಅಲ್ಲಿಂದ ಡಾ. ಅಂಬೇಡ್ಕರ ವೃತ್ತ, ಗಾಂಧೀಜಿ ವೃತ್ತದವರೆಗೆ, ಡಾ. ಅಂಬೇಡ್ಕರ್ ವೃತ್ತದಿಂದ ಮೋರಟಗಿ ಬೈ ಪಾಸ್ ವರೆಗೆ ರಸ್ತೆಯ ಮಧ್ಯೆ ವಿದ್ಯುತ್ ಕಂಬಗಳ ಅಳವಡಿಕೆಗೆ ರೂ 5 ಕೋಟಿ, ದಿನದ 24 ಗಂಟೆಗಳ ಕುಡಿಯುವ ನೀರಿನ ಸೌಲಭ್ಯ ಪೂರೈಕೆಗೆ ರೂ 49 ಕೋಟಿ ಮಂಜೂರಾಗಿವೆ ಕೆಲ ದಿನಗಳಲ್ಲಿ ಕಾಮಗಾರಿ ಪ್ರಾರಂಭಗೊಳ್ಳುತ್ತವೆ ಅಲ್ಲದೆ ಅಪೂರ್ಣಗೊಂಡ ಮಿನಿ ವಿಧಾನ ಸೌಧಕ್ಕೆ ರೂ 5 ಕೋಟಿ ಪ್ರಸ್ತಾವನೆ ಕಳಿಸಲಾಗಿದೆ. ಹಂತ ಹಂತವಾಗಿ ಕ್ಷೇತ್ರದ ಅಭಿವೃದ್ಧಿಗೆ ಮುಂದಾಗಿ ಜನಸಾಮಾನ್ಯರ ಋಣ ತಿರಿಸುತ್ತೇನೆ ಎಂದು ಭರವಸೆ ನೀಡಿದರು.

ಆಟೋ ಚಾಲಕ ಮತ್ತು ಮಾಲೀಕರ ಸಂಘದ ಅದ್ಯಕ್ಷ ಸಲೀಂ ಅಲ್ದಿ ಮಾತನಾಡಿ, ಪಟ್ಟಣದ ಎಲ್ಲ ರಸ್ತೆಗಳು ತಗ್ಗು ದಿನ್ನೆಗಳಿಂದ ಕೂಡಿವೆ ಅವುಗಳ ಸುಧಾರಣೆಗೆ ಕ್ರಮ ಜರುಗಿಸಬೇಕು. ಆಟೋ ಚಾಲಕರು ಆರ್ಥಿಕವಾಗಿ ಹಿಂದುಳಿದಿದ್ದು ಅವರಿಗೆ ಸೂರು ನೀಡುವ ಕಾರ್ಯ ಮಾಡಬೇಕು, ಪಟ್ಟಣದಲ್ಲಿ 5 ಕಡೆ ಆಟೋ ಸ್ಟ್ಯಾಂಡ್‍ಗಳಿಗೆ ಅದರಲ್ಲಿ ಒಂದು ಮಾತ್ರ ನಿರ್ಮಾಣ ಕಂಡಿದೆ ಇನ್ನುಳಿದ ನಿಲ್ದಾಣಗಳ ನಿರ್ಮಾಣಕ್ಕೆ ಮುಂದಾಗಬೇಕು. ಅಟೋ ಚಾಲಕರ ಮಕ್ಕಳು ಆರ್ಥಿಕ ತೊಂದರೆಯಿಂದ ಖಾಸಗಿ ಶಾಲೆಗಳ ಓದುವ ಹಾಗೆ ಇಲ್ಲ ಸರಕಾರಿ ಶಾಲೆಯಲ್ಲೆ ಕಲಿಸಬೇಕು ಅದಕ್ಕೆ ಅವುಗಳ ಜೀರ್ಣೋದ್ದಾರಕ್ಕೆ ಮುಂದಾಗಿ ಒಳ್ಳೆಯ ಅಧಿಕಾರಿಯನ್ನು ನಿಯೋಜನೆ ಮಾಡಬೇಕು ಎಂದು ಆಗ್ರಹಿಸಿದರು.  

- Advertisement -

ಕಾಂಗ್ರೆಸ್ ಮುಖಂಡ ಎಂ.ಎ.ಖತೀಬ, ಬ್ಲಾಕ್ ಕಾಂಗ್ರೆಸ ಸಮಿತಿ ಅಧ್ಯಕ್ಷ ಸುರೇಶ ಪೂಜಾರಿ, ದಸಂಸ ಜಿಲ್ಲಾ ಸಂಚಾಲಕ ವೈ.ಸಿ.ಮಯೂರ ಮಾತನಾಡಿದರು.

ಈ ಸಂದರ್ಭದಲ್ಲಿ ಗುತ್ತಿಗೆದಾರರ ಮುತ್ತು ಮುಂಡೆವಾಡಗಿ, ಮಾಜಿ ಜಿಪಂ ಸದಸ್ಯ ಮಹಾಂತಗೌಡ ಪಾಟೀಲ, ಮಂಜು ಬಿಜಾಪುರ, ಲೋಕೋಪಯೋಗಿ ಇಲಾಖೆಯ ಎಇಇ ತಾರನಾಥ ರಾಠೋಡ, ಬಸವರಾಜ ಯರನಾಳ, ಇರ್ಫಾನ ತಲಕಾರಿ, ಸಿ.ಎಂ.ದೇವರಡ್ಡಿ, ಬಸವರಾಜ ತೆಲ್ಲೂರ, ಪುರಸಭೆ ಆರೋಗ್ಯಾಧಿಕಾರಿ ನಬೀರಸೂಲ ಉಸ್ತಾದ, ಲಕ್ಷ್ಮೀಕಾಂತ ಸೂಡಿ, ರವಿ ಹೋಳಿ ಸೇರಿದಂತೆ ಅಟೋ ಚಾಲಕರ ಸಂಘದ ಸದಸ್ಯರು ವೇದಿಕೆ ಮೇಲಿದ್ದರು.

- Advertisement -
- Advertisement -

Latest News

ಸಿಂದಗಿ ಅಧ್ಯಕ್ಷರಾಗಿ ಶಾಂತವೀರ, ಉಪಾಧ್ಯಕ್ಷರಾಗಿ ರಾಜಣ್ಣಿ ಆಯ್ಕೆ

ಸಿಂದಗಿ; ಪಟ್ಟಣದ ಪುರಸಭೆಯ ಅಧ್ಯಕ್ಷ, ಉಪಾದ್ಯಕ್ಷರ ಅವಧಿ ಮುಗಿದು ಹಲವು ವರ್ಷಗಳು ಕಳೆದಿತ್ತು ಅದು ಅ. ೨೮ ರಂದು ಚುನಾವಣೆ ಪ್ರಕ್ರಿಯೆ ಪ್ರಾರಂಭಿಸಿ ಸೆ.೯ ದಿನಾಂಕ...
- Advertisement -

More Articles Like This

- Advertisement -
close
error: Content is protected !!
Join WhatsApp Group