spot_img
spot_img

ಮುದ್ದು ಮಕ್ಕಳಿಗೆ ಮಾತು ಕಲಿಸಿದ ಪೂರ್ವ ಪ್ರಾಥಮಿಕ ಶಾಲೆ – ಶಂಕರಲಿಂಗಯ್ಯ ಹಿರೇಮಠ

Must Read

- Advertisement -

ಸಿಂದಗಿ: ಪೂರ್ವ ಪ್ರಾಥಮಿಕ ಗುಣಮಟ್ಟದ ಶಿಕ್ಷಣ  ವಿದ್ಯಾರ್ಥಿಗಳಿಗೆ ನೀಡುವದರಿಂದ ಆ ಮಗು  ತನ್ನ ಜೀವನದ ಮೌಲ್ಯ ಗಳನ್ನು  ಅರಿತು ಕೊಂಡು  ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಬಾಳಲು ಸಹಕಾರಿಯಾಗುತ್ತದೆ ಎಂದು ತಾಲೂಕು ಜಂಗಮ ಕ್ಷೇಮಾಭಿವೃದ್ದಿ ಸೇವಾ ಸಂಘದ ಅಧ್ಯಕ್ಷ ಜಾನಪದ ಸಾಹಿತಿ ಶಂಕರಲಿಂಗಯ್ಯ ಶಾಂ ಹಿರೇಮಠ ಹೇಳಿದರು.

ತಾಲೂಕಿನ ಬಂದಾಳ ಗ್ರಾಮದ ಸಿದ್ದೇಶ್ವರ ಪೂರ್ವ ಪ್ರಾಥಮಿಕ ಶಾಲೆಯ  ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಶಿಕ್ಷಣಕ್ಕೆ ಕೊಡುವಷ್ಟೇ ಮಹತ್ವವನ್ನು ಜೀವನದ ಮೌಲ್ಯಗಳಿಗೂ ಕೊಡಬೇಕು. ಈ ನಿಟ್ಟಿನಲ್ಲಿ ವಿದ್ಯಾರ್ಥಿ ಗಳು ಮಾನವೀಯ ಗುಣಗಳ ಜತೆಯಲ್ಲಿ ಸಂಬಂಧಗಳ ಮಹತ್ವಗಳನ್ನು ಅರಿತು ಕೊಂಡು ಅವುಗಳನ್ನು ತಮ್ಮಲ್ಲಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಶಿಕ್ಷಕ ಮಕ್ಕಳ ಸಾಹಿತಿ ಬಸವರಾಜ ರಾ. ಅಗಸರ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯೂ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರು ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಅವರು ಮುಂದಿನ ಭವಿಷ್ಯಕ್ಕಾಗಿ ಜೀವನದ ಮೌಲ್ಯಗಳ ಮಹತ್ವವನ್ನು ಅರಿತು ಕೊಂಡರೆ ಮೌಲ್ಯಾಧಾರಿತ ಜೀವನ ನಡೆಸಲು ಸಾಧ್ಯವಾಗುತ್ತದೆ. ಇದರ ಜತೆಯಲ್ಲಿ ತನ್ನ ಭವಿಷ್ಯದ ಬಗ್ಗೆ ಮನಸಿನಲ್ಲಿ ಗುರಿಯನ್ನಿಟ್ಟುಕೊಂಡು ಆಶಾವಾದಿಗಳಾಗಬೇಕು ಎಂದು ಹೇಳಿದರು.

- Advertisement -

ಅಧ್ಯಕ್ಷತೆ ವಹಿಸಿದ ನಿಂಗನಗೌಡ ಎಸ್ ಬಿರಾದಾರ, ಬೂದಿಹಾಳ ಪಿ ಎಚ್ ಶಾಲೆಯ ಹಿರಿಯ ಶಿಕ್ಷಕ ಬನ್ನಪ್ಪ ದೇವರಮನಿ, ಚಿಕ್ಕಸಿಂದಗಿ ಪಿ ಕೆ ಪಿ ಎಸ್ ಸದಸ್ಯ ಬಸಯ್ಯ ಚ ಹಿರೇಮಠ ಸಾನ್ನಿಧ್ಯ ವಹಿಸಿದರು.          

ಅಪ್ಪರಾಯಗೌಡ ಜಿ .ಬಿರಾದಾರ ಕಾರ್ಯಕ್ರಮ ಉದ್ಘಾಟಿಸಿದರು. ಬಂದಾಳ ಗ್ರಾಮ ಪಂಚಾತ ಮಾಜಿ ಅಧ್ಯಕ್ಷ ರಾಮಚಂದ್ರ ಶ ಗೊಬ್ಬೂರ ಪೂಜೆ ನೆರವೇರಿಸಿದರು. ಈ ಸಮಾರಂಭದಲ್ಲಿ ನಿವೃತ್ತ ಶಿಕ್ಷಕ ಶಿವಶರಣಯ್ಯ ಹಿರೇಮಠ, ಬೂದಿಹಾಳ ಪಿ ಹೆಚ್ ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಶಿಕ್ಷಕ ಬನ್ನೆಪ್ಪ ಶ ದೇವರಮನಿ, ಪಿ.ಕೆ ಪಿ.ಎಸ್ ಬ್ಯಾಂಕ ಸದಸ್ಯ ಸಂಗಣ್ಣ ಗು.ಕಡಕೋಳ, ವ್ಯಾಪಾರಸ್ಥ ಖಾಜಾಸಾಬ ಲಾ.ನದಾಫ ಅವರನ್ನು ವಿಶೇಷವಾಗಿ ಸನ್ಮಾನಿಸಿ ಗೌರವಿಸಿದರು.

ಮುಖ್ಯ ಅತಿಥಿಗಳಾಗಿ ಮಾಜಿ ಗ್ರಾ.ಪಂ ಅಧ್ಯಕ್ಷ ಶ್ರೀಶೈಲ ಶ ಬಿರಾದಾರ, ಸಮಾಜ ಸೇವಕ ಮಲ್ಲಪ್ಪ ಭೀ ಹೆರಕಲ್ಲ,  ಪ್ರಗತಿಪರ ರೈತ ನಿಂಗಪ್ಪ ನಾ .ಬಿರಾದಾರ, ಸಮಾಜ ಸೇವಕ ನಾನಾಗೌಡ ಬಾ .ಪಾಟೀಲ, ಸಮಾಜ ಸೇವಕ ರಮೇಶ ಮ.ಬೂದಿಹಾಳ, ಸಾರಿಗೆ ಇಲಾಖೆಯ ಸಿದಗೊಂಡಪ್ಪ ಶ್ರೀ ದೇವರಮನಿ, ಬಂದಾಳ  ಗ್ರಾ.ಪಂ.ಸದಸ್ಯ ಮಲ್ಲಿಕಾರ್ಜುನ ವ್ಹಿ ಬೂದಿಹಾಳ, ಗ್ರಾ.ಪಂ.ಸದಸ್ಯ ಶ್ರೀಶೈಲ ಸಂ.ಕುಂಬಾರ, ನ್ಯಾಯಬೆಲೆ ಅಂಗಡಿಯ ಸಾಹೇಬಗೌಡ ಸಿ.ಬಗಲಿ, ಗುತ್ತಿಗೆದಾರ ಸಂಮೇಶ ಮ.ಯಳಮೇಲಿ, ಸಮಾಜ ಸೇವಕ ನಿಂಗೊಂಡಪ್ಪ ಶಂ. ಯಳಸಂಗಿ,.ಗ್ರಾ. ಪಂ .ಸದಸ್ಯ  ಅಶೋಕ ತಳವಾರ ಸೇರಿದಂತೆ ಕಾರ್ಯಕ್ರಮದಲ್ಲಿ ಪಾಲಕರು ಭಾಗವಹಿಸುವರೆಂದು ಸಿದ್ದೇಶ್ವರ ಪೂರ್ವ ಪ್ರಾಥಮಿಕ ಶಾಲೆಯ ಸಂಚಾಲಕ ಮಾರ್ಗದರ್ಶಕ ಶಿಕ್ಷಕ ಉಮೇಶ ಬೂದಿಹಾಳ ಸ್ವಾಗತಿಸಿದರು. ಅಶೋಕ ಬೂದಿಹಾಳ ವಂದಿಸಿದರು. ಶಿಕ್ಷಕ ಅಯ್ಯಪ್ಪ ಹಿಪ್ಪರಗಿ ನಿರೂಪಿಸಿದರು.

- Advertisement -

ಇದೇ ಸಂದರ್ಭದಲ್ಲಿ ವಾರ್ಷಿಕೋತ್ಸವದ ಅಂಗವಾಗಿ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು  ಜನಮನ ಸೂರೆಗೊಂಡವು.

- Advertisement -
- Advertisement -

Latest News

ಕವನ : ಗೊಂಬೆಗಳ ಕಣ್ಣೀರು

ಗೊಂಬೆಗಳ ಕಣ್ಣೀರು ಅಂದು ನಾವು ಅಪ್ಪ ಅವ್ವನನ್ನು ಕಾಡಿ ಬೇಡಿ ಗೊಂಬೆಗಳಿಗಾಗಿ ಅಳುತ್ತಿದ್ದೆವು ಜಾತ್ರೆ ಉತ್ಸವದಲ್ಲಿ ಹಿರಿಯರಿಗೆ ದೇವರ ಮೇಲಿನ ಭಕ್ತಿ ನಮಗೋ ಬಣ್ಣ ಬಣ್ಣದ ಗೊಂಬೆಗಳ ಮೇಲೆ ಆಸಕ್ತಿ ಅವ್ವ ಹೇಗೋ ಮಾಡಿ ಅಪ್ಪನ ತುಡುಗಿನಲಿ ತನ್ನಲಿದ್ದ ದುಡ್ಡು ಕೊಟ್ಟು ತಂದಳು ಗೊಂಬೆಗಳ ಮಿತಿ ಇರಲಿಲ್ಲ...
- Advertisement -

More Articles Like This

- Advertisement -
close
error: Content is protected !!
Join WhatsApp Group