spot_img
spot_img

ತಂದೆತಾಯಿಗಳು ಮಕ್ಕಳಿಗೆ ಸಂಸ್ಕಾರದ ಜೊತೆಗೆ ಭಗವಂತನ ಭಕ್ತಿಭಾವ ತುಂಬಬೇಕು -ಲೋಹಿತ್ ಕಲಾಲ

Must Read

- Advertisement -

 

ಮೂಡಲಗಿ: ತಂದೆತಾಯಿಗಳು ಮಕ್ಕಳಿಗೆ ಸಂಸ್ಕಾರದ ಜೊತೆಗೆ ಭಗವಂತನ ಭಕ್ತಿಭಾವ ತುಂಬಬೇಕು ಮಕ್ಕಳಲ್ಲಿ ವಿದ್ಯೆಯ ಜೊತೆಗೆ ಬದುಕು ನಮ್ಮ ಜೀವನದ ಆಶಾಭಾವನೆಗಳಂತೆ ಇರಬೇಕು ಹಾಗೂ ನಾವು ಮಾಡುವ ಕಾಯಕದಲ್ಲಿ ಶ್ರದ್ಧೆ ಇರಬೇಕು ಅಲ್ಲದೇ ದೇವರಲ್ಲಿ ಭಕ್ತಿ ತೋರಿಸುವುದರ ಜೊತೆಗೆ ಆಧ್ಯಾತ್ಮಿಕ ಶಕ್ತಿ ನಮ್ಮಲ್ಲಿ ಬಲವಾಗುವಂತಿರಬೇಕು ಮತ್ತು ನಮ್ಮ ನಾಡಿನ ಆಧ್ಯಾತ್ಮಿಕ ಭಕ್ತಿ ವಿಶ್ವಕ್ಕೆ ಉತ್ತಮ ಸಂದೇಶ ನೀಡುವದರೊಂದಿಗೆ ಸಾಯಿಬಾಬಾರ ಎರಡು ಅವತಾರಗಳು ಜನರ ಕಲ್ಯಾಣದಲ್ಲಿ ದೇವರನ್ನು ಕಾಣಬಹುದು ಎಂಬುದನ್ನು ತೋರಿಸಿವೆ ಅಂತಹ ಕಲ್ಪನೆ ನಮ್ಮ ಮಕ್ಕಳಲ್ಲಿ ಹುಟ್ಟುವಂತೆ ನೋಡಿಕೊಳ್ಳಬೇಕೆಂದು ಕಲ್ಲೋಳಿಯ ಶ್ರೀಸತ್ಯಸಾಯಿ ಸೇವಾ ಸಮಿತಿಯ ಸಂಚಾಲಕ ಲೋಹಿತ್ ಕಲಾಲ ಹೇಳಿದರು.

ಅವರು ಸ್ಥಳೀಯ ಆರ್.ಡಿ.ಎಸ್. ಶಿಕ್ಷಣ ಸಂಸ್ಥೆಯಲ್ಲಿ ಜರುಗಿದ ಶ್ರೀಸತ್ಯಸಾಯಿ ಸೇವಾ ಸಮಿತಿಯ 17ನೇಯ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸಾಯಿಬಾಬಾರ ನಂಬಿಕೆ ಮತ್ತು ಸೇವೆಯ ಕಾರ್ಯವು  ಸತ್ಯ, ಧರ್ಮ, ಶಾಂತಿ, ಪ್ರೇಮ ಅಹಿಂಸೆಗಳಂಬ ಸಿದ್ದಾಂತಗಳಿಂದ ಕೂಡಿದ್ದು ಇವುಗಳು ನಮ್ಮನ್ನು ರಕ್ಷಿಸುವ ಶಕ್ತಿಗಳಾಗಿವೆ ಎಂದರು.

- Advertisement -

ಕಾರ್ಯಕ್ರಮದಲ್ಲಿ ಮೂಡಲಗಿ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ ಮಾತನಾಡುತ್ತಾ, ಮೂಡಲಗಿಯ ಶ್ರೀಸತ್ಯಸಾಯಿ ಸೇವಾ ಸಮಿತಿಯು ಶಿಕ್ಷಣ, ಸಮಾಜಸೇವೆ ಸಾಮಾಜಿಕ ಕಾರ್ಯಗಳೊಂದಿಗೆ ಭಗವಂತನ ಸೇವೆ ಮಾಡುವದರ ಜೊತೆಗೆ ಸ್ಥಳೀಯ ಶಾಸಕರ ಹಾಗೂ ಎಲ್ಲ ಸಮುದಾಯದ ನಾಯಕರುಗಳ ಮತ್ತು ಅಧಿಕಾರಿಗಳಿಂದ ದೇಣಿಗೆಯನ್ನು ಪಡೆದು ಲಕ್ಷ್ಮೀ ನಗರದಲ್ಲಿ ಭವ್ಯವಾದ ಎರಡು ಅವತಾರಗಳನ್ನು ಒಳಗೊಂಡ ಸಾಯಿಮಂದಿರ ನಿರ್ಮಾಣ ಮಾಡುತ್ತಿರುವುದು ಹೆಮ್ಮೆಯ ವಿಷಯ ಎಂದು ಸ್ಮರಿಸಿದರು.

ಬೆಳಗಾವಿ ಜಿಲ್ಲಾ ಸಂಯೋಜಕರಾದ ವಿಕ್ರಮ ಮುರಳಿ ಮಾತನಾಡಿ ಸಮಾಜ ಸೇವೆ ಮತ್ತು ಭಕ್ತಿ ಮಾರ್ಗದಿಂದ ನಡೆದರೆ ನಮ್ಮ ಜೀವನದಲ್ಲಿ ಶ್ರೀಸಾಯಿಯನ್ನು ಸಾಕ್ಷಾತ್ಕಾರಗೊಳಿಸಿಕೊಳ್ಳಬಹುದು ಎಂದರು.

ಬೆಳಗಾವಿ ವಿಭಾಗದ ಸಂಪನ್ಮೂಲ ವ್ಯಕ್ತಿಗಳಾದ ಸುರೇಶ ಕಬ್ಬೂರ ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡಿ, ಶ್ರೀಸಾಯಿಬಾಬರು ದೈವಿಕ ಪವಾಡ ಪುರುಷರಾಗಿದ್ದು ಯಾರು ಅವರನ್ನು ಪೂಜಿಸುತ್ತಾರೆ. ಅವರಿಗೆ ಸಾಯಿಬಾಬಾ ದೈವಿಕ ಶಕ್ತಿಯನ್ನು ನೀಡುತ್ತಾನೆ ಮತ್ತು ಮೂಡಲಗಿಯಲ್ಲಿ ಸಾಯಿಬಾಬರ ಸೇವಾ ಕಾರ್ಯವನ್ನು ನಮ್ಮ ಸಮಿತಿಯವರು ಉತ್ತಮವಾಗಿ ಸಂಘಟಿಸುತ್ತಿರುವದು ಆಶಾದಾಯಿಕ ಬೆಳವಣಿಗೆ ಎಂದರು.

- Advertisement -

ಸುಣದೋಳಿಯ ಶ್ರೀಜಡಿಸಿದ್ದೇಶ್ವರ ಮಠದ ಪೀಠಾಧಿಪತಿಗಳಾದ ಶಿವಾನಂದ ಮಹಾಸ್ವಾಮಿಗಳು ಆರ್ಶೀವಚನ ನೀಡುತ್ತಾ ಸಮಾಜದಲ್ಲಿ ಸೇವಾಮನೋಭಾವವನ್ನು ಭಕ್ತಿಯಿಂದ ಅಳವಡಿಸಿಕೊಳ್ಳಲು ಪ್ರಯತ್ನಿಸುವದೇ ನಮ್ಮ ಕಾಯಕವಾಗಬೇಕೆಂದರು. 

ದಿವ್ಯಸಾನ್ನಿಧ್ಯವನ್ನು ಮೂಡಲಗಿ ಸಿದ್ದಸಂಸ್ಥಾನ ಮಠದ ಪೀಠಾಧಿಪತಿಗಳಾದ ಶ್ರೀಶ್ರೀ ದತ್ತಾತ್ರೇಯಬೋಧ ಸ್ವಾಮೀಜಿಗಳು ಆರ್ಶೀವಚನ ನೀಡುತ್ತಾ ಕಷ್ಟದಲ್ಲಿ ದುಃಖದಲ್ಲಿ ಇದ್ದ ವ್ಯಕ್ತಿಗೆ ಸಹಾಯ ಮಾಡುವದರಿಂದ ಪರಮಾತ್ಮನನ್ನು ಕಾಣಬಹುದು ಪರಮಾತ್ಮನ ಧ್ಯಾನ ಮಾಡುತ್ತಿರುವಾಗ ಮನಸ್ಸಿನಿಂದ ಮತ್ಸರ ಮತ್ತು ಲೋಭದ ಗುಣಗಳು ಮಾಯವಾಗುತ್ತವೆ ಶ್ರದ್ಧೆ ಮತ್ತು ನಿಷ್ಠೆಯ ಕಾಯಕದಲ್ಲಿ ಸಾಯಿಬಾಬರನ್ನು ಕಾಣಬಹುದು ಎಂದರು.

ಕಾರ್ಯಕ್ರಮದಲ್ಲಿ ಆರ್.ಡಿ.ಎಸ್. ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಸಂತೋಷ ಪಾರ್ಶಿ, ಮೂಡಲಗಿಯ ಶ್ರೀಸತ್ಯಸಾಯಿ ಸೇವಾ ಸಮಿತಿಯ ಸದಸ್ಯರು ಹಾಗೂ ಬೆಳಗಾವಿ ಜಿಲ್ಲೆ ವಿವಿಧ ತಾಲೂಕಾ ಶ್ರೀಸತ್ಯಸಾಯಿ ಸೇವಾ ಸಮಿತಿಯ ಸಂಚಾಲಕರು ಸಾಯಿಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು 

ರೇಣುಕಾದೇವಿ ದೊಡಮನಿ ಸ್ವಾಗತಿಸಿದರು ಕುಮಾರಿ ಲತಾ ಪಾಂಡು ಬುದ್ನಿ ನಿರೂಪಿಸಿದರು ಶಿವಲೀಲಾ ಮಠಪತಿ ವಂದಿಸಿದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

Yuva Movie: ಯುವ ರಾಜ್‌ಕುಮಾರ್ ಅವರ ಚಿತ್ರದ ಕಥೆ ಲೀಕ್ ಆಯ್ತಾ?

ಕನ್ನಡ ಚಲನಚಿತ್ರ "ಯುವ" ಮಾರ್ಚ್ 2024 ರಲ್ಲಿ ಬಿಡುಗಡೆಗೆ ಸಿದ್ಧವಾಗಿದೆ. ಈ ಚಿತ್ರದಲ್ಲಿ ಪ್ರಸಿದ್ಧ ಕನ್ನಡ ನಟ ರಾಘವೇಂದ್ರ ರಾಜ್‌ಕುಮಾರ್ ಅವರ ಪುತ್ರ ಯುವ ರಾಜ್‌ಕುಮಾರ್...
- Advertisement -

More Articles Like This

- Advertisement -
close
error: Content is protected !!
Join WhatsApp Group