ಜೈ ಗುರುದೇವ
ಅಜ್ಞಾನದ ಕತ್ತಲೆಯಿಂದ
ತಪ್ಪಾಗಿ ಇಟ್ಟ ಹೆಜ್ಜೆಯಿಂದ
ಅಂಧಕಾರದ ಮೌಢ್ಯದಿಂದ
ಜಂಜಾಟದ ಬದುಕಿನಿಂದ ನನ್ನನ್ನು ಪಾರುಮಾಡುವ
ಶ್ರೀ ಗುರುವೇ
ನಿಮಗಿದೋ ನಮೋಸ್ತುತೆ
ಜೈ ಗುರುದೇವ
ಅರಿವಿನ ಹೆಜ್ಜೆಯ ಕಡೆ
ದಾರಿ ತೋರಿದ
ನನ್ನೆದೆಯಲಿ ಅಕ್ಷರದ ಬೀಜ ಬಿತ್ತಿ
ಜ್ಞಾನದ ಅಮೃತ ಉಣಬಡಿಸಿದ
ಸತ್ಸಂಗದ ಫಲ ಕಾರ್ಯಸಿದ್ಧಿ
ಎಂದು
ನನ್ನ ಮಂದ ಬುದ್ಧಿಗೆ
ಎಚ್ಚರಿಸಿದ
ಶ್ರೀ ಗುರುವೇ
ನಿಮಗಿದೋ ನಮೋಸ್ತುತೆ
ಜೈ ಗುರುದೇವ
ಗುರು ನಿಮಗೆ ನಾ ಗುಲಾಮನಾಗದಿದ್ದರೆ
ಪ್ರೀತಿಯ ಶಿಷ್ಯನಾಗದಿದ್ದರೆ
ಹೇಳಿದ ಮಾತು ಕೇಳದಿದ್ದರೆ
ಆಡುವ ಮಾತು ನೋಡುವ ನೋಟ ಸರಿಯಿರದಿದ್ದರೆ
ತಕ್ಕ ಪಾಠವ ಕಲಿಸುವ
ಸದ್ಗುರುವೇ ನಿಮಗಿದೋ ನಮೋಸ್ತುತೆ ಜೈ ಗುರುದೇವ
ಜಗದಲಿ ನೀ ಇಲ್ಲದಿರೆ
ಮೋಕ್ಷವಿಲ್ಲ
ಭಗವಂತನ ದಾರಿ ತೋರಿಸುವ ಕರುಣಾಮಯಿ ನೀ
ಸಕಲ ಮಾನವಕುಲಕೋಟಿಯ ಆತ್ಮಬಂಧು ನೀ
ಸನ್ಮಾರ್ಗದ ಹಾದಿ ತೋರಿಸಿ
ಎಲೆಮರೆಯಲ್ಲಿಯೇ ಉಳಿಯುವ ಅದ್ಭುತ ದೈವ
ಶ್ರೀ ಗುರು
ನಿಮಗಿದೋ ನಮೋಸ್ತುತೆ
ಜೈ ಗುರುದೇವ
(ಸರ್ವ ಗುರುಬಳಗಕ್ಕೆ ಗುರುಪೂರ್ಣಿಮೆಯ ಶುಭಾಶಯಗಳು)
✍️ ಶಿವಕುಮಾರ ಕೋಡಿಹಾಳ ಮೂಡಲಗಿ