ಕವನ : ನಾನು ಬೆಂಕಿಯ ಮಗಳು

0
99

ನಾನು ಬೆಂಕಿಯ ಮಗಳು

ಬಿರುನುಡಿಗಳ ಬಿರುಸು ಬಾಣಗಳ ನೋವನುಂಡು
ಬೆಳೆದವಳು ನಾನು
ನಿಮ್ಮ ಕುಹಕ ನಗೆ
ನನ್ನನ್ನೇನು ಮಾಡೀತು?

ನನ್ನದೇ ಕನಸು
ಗುರಿಗಳ ಗಮ್ಯತೆಯಲಿ
ನಡೆದವಳು ನಾನು
ನಿಮ್ಮ ಅಲಕ್ಷ್ಯ,,ನಿರ್ಲಕ್ಷ್ಯ
ನನ್ನನೇನು ಮಾಡೀತು?

ಚೂರಿಯಂತ ಬದುಕ
ದಾರಿ ಸಾಗಿ ಮುಂದೆ ಬಂದವಳು ನಾನು
ನಿಮ್ಮ ಬೆನ್ನಿನ ಚೂರಿ ನನ್ನನ್ನೇನು ಮಾಡೀತು?

ಕಷ್ಟಗಳ ಕಲ್ಲು ಕವಣೆ
ಹಾದಿಯಲಿ ನಡೆದವಳು ನಾನು
ನಿಮ್ಮ ಕಾಲೆಳೆಯುವಿಕೆ
ನನ್ನನ್ನೇನು ಮಾಡೀತು?

ದಿವ್ಯ ಧಿಕ್ಕಾರವಿರಲಿ
ಬೆನ್ನ ಹಿಂದೆ ಬೊಗಳುವ ಶ್ವಾನಗಳಿಗೆ……

ಹೆಣ್ಣು ಹೆಣ್ಣೆಂದು ಮೂಗೆಳೆಯುವ ಮೂದೇವಿಗಳೇ
ಅವಳೊಡಲು ಇಲ್ಲದಿರೆ
ನಿಮಗೆಲ್ಲಿದೆ ಅಸ್ತಿತ್ವ?

 

ಶ್ರೀಮತಿ ಮೀನಾಕ್ಷಿ ಸೂಡಿ.
ಕವಯಿತ್ರಿ, ಚನ್ನಮ್ಮನಕಿತ್ತೂರು
ಬೆಳಗಾವಿ ಜಿಲ್ಲೆ