ಕವನ : ಗರತಿಯ ಹಾಡು

Must Read

ಜನಪದ ಶೈಲಿಯ
ಗರತಿಯ ಹಾಡು

ಮುಂಜಾನೆ ಏಳುತ್ತ
ಮನೆ ದೇವ್ರ ನೆನೆಯುತ್ತ
ಅಂಗಳದಿ ರಂಗೋಲಿ ಬಿಡಿಸ್ಯಾಳ
ಅಂಗಳದಿ ರಂಗೋಲಿ ಬಿಡಿಸ್ಯಾಳ
ಮಾದೇವಿ
ಮನದಾಗ ಮಾದೇವನ ನೆನೆದಾಳ||

ಪತಿಯ ಪ್ರಾಣ ಪದಕ
ವಂಶದ ಕುಲತಿಲಕ
ಮಕ್ಕಳಿಗೆ ಮಾಣಿಕ್ಯ ಮಾದೇವಿ
ಮಕ್ಕಳಿಗೆ ಮಾಣಿಕ್ಯ ಆಗ್ಯಾಳ
ಮಾದೇವಿ
ಹಿರಿಯರಿಗೆ ತಲೆಬಾಗಿ ನಡೆದಾಳ||

ನೆರೆಹೊರೆಗೆ ಬೇಕಾಗಿ
ಬಡವರಿಗೆ ನೆರವಾಗಿ
ಮನೆಯೆಂಬ ಮಂದಿರಕ್ಕೆ ಬೆಳಕಾಗಿ
ಮನೆಯೆಂಬ ಮಂದಿರಕ್ಕೆ ಬೆಳಕಾಗಿ
ಮಾದೇವಿ
ಗುರುವಿಗೆ ಶರಣಾಗಿ ನಡೆದಾಳ||

ಮನೆ ಕೆಲಸಕ್ಕೂ ಸೈ ಇವಳು
ಹೊರ ದುಡಿಮೆ ಬಲ್ಲವಳು
ಕಾಯಕವೇ ಕೈಲಾಸ ಅಂತಾಳ
ಕಾಯಕವೇ ಕೈಲಾಸ ಅಂತಾಳ
ಮಾದೇವಿ
ಕುಲಕೆ ಕೀರ್ತಿಯ ಕಳಸ ಆಗ್ಯಾಳ||

ಶ್ರೀಮತಿ ಮೀನಾಕ್ಷಿ ಸೂಡಿ
ಕವಯತ್ರಿ,ಲೇಖಕಿ
ದೇವಗಾಂವ,ಕಿತ್ತೂರು.

Latest News

ಗಾರ್ಡನ್ ಅಭಿವೃದ್ದಿಗೆ  ರೂ.೨೩.೩೯ ಲಕ್ಷ ವೆಚ್ಚದ ಕಾಮಗಾರಿಗೆ ಶಾಸಕ ಅಶೋಕ ಮನಗೂಳಿ ಚಾಲನೆ

ಸಿಂದಗಿ; ಆಯಾ ವಾರ್ಡುಗಳು ಸಾರ್ವಜನಿಕರು, ವಯೋ ವೃದ್ಧರು ವಾಯು ವಿಹಾರಕ್ಕೆ ಅನುಕೂಲವಾಗಲೆಂದು ಪಟ್ಟಣದ ಎಲ್ಲ ಉದ್ಯಾನವನಗಳ ಅಭಿವೃದ್ಧಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗುತ್ತಿದೆ. ಪಟ್ಟಣದಲ್ಲಿ ಒಟ್ಟು ೭೨...

More Articles Like This

error: Content is protected !!
Join WhatsApp Group