- Advertisement -
ನಿನ್ನ ಹೆಸರು ಹೇಳಿ
ಬಸವಣ್ಣ
ನಿನ್ನ ಹೆಸರು ಹೇಳಿ
ಮಠ ಪೀಠ ಆಶ್ರಮ
ಕಟ್ಟಿಕೊಂಡರಯ್ಯ
ಕಾವಿಗಳು
ಬಸವಣ್ಣ
ನಿನ್ನ ಹೆಸರು ಹೇಳಿ
ಶಾಸಕ ಮಂತ್ರಿಗಳಾಗಿ
ಕೆಂಪು ಗೂಟದ ಕಾರಿನಲ್ಲಿ
ಮೆರೆಯುವರಯ್ಯ ನಮ್ಮವರು
- Advertisement -
ಬಸವಣ್ಣ
ನಿನ್ನ ಹೆಸರು ಹೇಳಿ
ಪುಸ್ತಕ ರಚಿಸಿ
ಭಾಷಣ ಮಾಡಿ
ಪ್ರಶಸ್ತಿ ಪಡೆದರಯ್ಯ ಸಾಹಿತಿಗಳು
ಬಸವಣ್ಣ .
ನಿನ್ನ ಹೆಸರು ಹೇಳಿ
ನಿನ್ನ ಮೂರ್ತಿ ನಿಲ್ಲಿಸಿ
ದುಡ್ಡು ಎತ್ತುವರಯ್ಯಾ
ಬಸವ ಉದ್ಯಮಿಗಳು
ಬಸವಣ್ಣ
ನಿನ್ನ ಹೆಸರು ಹೇಳಿ
ಪ್ರಮಾಣ ವಚನ ಸ್ವೀಕರಿಸಿ
ದೇಶ ನಾಡು ಕೊಳ್ಳೆ ಹೊಡೆದರಯ್ಯ
ಎಲ್ಲಾ ಪಕ್ಷದ ಕ್ರಿಮಿಗಳು
- Advertisement -
ಬಸವಣ್ಣ
ನಿನ್ನ ಹೆಸರು ಹೇಳಿ
ನಿನ್ನ ಚಳುವಳಿ ಸಮಾಧಿ ಮಾಡಲು
ಹೊರಟವರ ಕಂಡು ಮರುಗಿದೆ
ಬಸವ ಪ್ರಿಯ ಶಶಿಕಾಂತ
ಡಾ.ಶಶಿಕಾಂತ ರುದ್ರಪ್ಪ ಪಟ್ಟಣ, ರಾಮದುರ್ಗ