- Advertisement -
ಅಪ್ಪ ಅಂದ್ರೆ ಆಕಾಶ
ಸಂಸಾರವೆಂಬ ಸಾಗರದಿ
ಬದುಕಿನ ಬವಣೆಯ ಹೊತ್ತು
ತನ್ನವರ ಸಂತಸಕ್ಕಾಗಿ ಹಗಲಿರುಳು ಶ್ರಮಿಸುವ ಭಾವಜೀವಿ ಅಪ್ಪ
ಮಕ್ಕಳ ಪಾಲಿನ ಶಿಸ್ತಿನ ಸಿಪಾಯಿ
ಬದುಕಿನ ಬಂಡಿಯ ನಡೆಸುವ
ಸವಾರ
ಅಮ್ಮನ ಪಾಲಿನ ಸಹಕಾರದ
ಸಹಮಿತ್ರ
ಸಾಲ ಸೋಲಕೂ ಹೆದರದ ಜೀವ
ಮನೆಗಾಗಿ ತನ್ನ ಸುಖವ ಮರೆಯುವ ಮುಗ್ಧಜೀವಿ ಅಪ್ಪ
- Advertisement -
ನನಗಿಂತ ನನ್ನ ಮಕ್ಕಳು ನೂರು ಹೆಜ್ಜೆ ಮುಂದಿಡಲಿ
ನನ್ನ ಸುಖಕ್ಕಿಂತ ಮಕ್ಕಳ ಸುಖ ಮುಖ್ಯ ಎಂಬ ಭಾವದಲಿ
ಸಂಸಾರದ ಎಲೆಮರೆಯ ಕಾಯಿಯಾಗಿ
ಜೀವ ಸವೆಸುವ
ಅಪ್ಪ ಅಂದ್ರೆ ಆಕಾಶವೇ!
ತಾಯಿಯ ಪ್ರತಿರೂಪವಾದ ಅಪ್ಪ ಯಾಕೋ ಹಿಂದುಳಿದುಬಿಟ್ಟ ಎನ್ನುವ ಬುದ್ಧಿಜೀವಿಗಳಿಗೆ
ಅಪ್ಪನ ತ್ಯಾಗ ಕಾಣಲು ಅಪ್ಪನ ಅಂತರಾಳವನ್ನೊಮ್ಮೆ ಹೊಕ್ಕು ನೋಡಿ
ಅವನಿಲ್ಲದೇ ಬದುಕಿಲ್ಲ
ಅಪ್ಪ ಅಂದ್ರೆ ಆಕಾಶನೇ !
ಶಿವಕುಮಾರ ಕೋಡಿಹಾಳ ಮೂಡಲಗಿ