ಕವನ : ಶಿವನೆದೆಯಲ್ಲಿ ಸಂಲಗ್ನವಾಗುವೆ

Must Read

ಶಿವನೆದೆಯಲ್ಲಿ ಸಂಲಗ್ನವಾಗುವೆ

ಸಿಂಧು ಗಂಭೀರ ಬೇಕೆನ್ನ ಬಾಳಿಗೆ
ಸಾಗು ಮನವೆ ಮಹಾಶರಣನಂತೆ
ಶುದ್ಧನಾಗು ಬುದ್ಧದೇವನಂತೆ
ಎಳೆಗರುವ ನೆನೆದೋಡುವ
ತುರುವಾತುರವಿರಲಿ
ಬಾಳ ಗೆಲ್ಲುವೆನೆಂಬ ಧೈರ್ಯವಿರಲಿ
ಜೀವ ಕೃತಿ ಮುಗಿಸುವ ಹುಚ್ಚಿರಲಿ
ಭಾವ ಬೆಟ್ಟಕ್ಕೆ ಜಿಗಿವ ಕೆಚ್ಚಿರಲಿ
ಬಾಳ ಪಯಣದಲಿ ನೊರೆಂಟು ತೊಡಕಿದ್ದರೂ ಸ್ವಾಗತಿಸುವೆ
ನದಿಯಂತೆ ಹರಿದೆಲ್ಲವನು ದಾಟುವೆ
ಸಾರಸ್ವತ ಸಾಗರದಾಲಿಂಗನದಲ್ಲಿ ನನ್ನನ್ನೆ ಮರೆತು ಸೌಮ್ಯವಾಗುವೆ!
ಯೋಗ ಬುದ್ಧನಾಗಿ, ಶಾಂತಿ ಬೋಗಿಯಾಗಿ ವಿಶ್ರಾಂತಿ ಉಯ್ಯಾಲೆಯಲ್ಲಿ ತೂಗಿ ತೊನೆವೆ
ಅದೃಶ್ಯ ಪರ್ವತದ ಶಿವನೆದೆಯಲ್ಲಿ ಸಂಲಗ್ನವಾಗುವೆ.

 

ಎಸ್.ಎಸ್.ಪುಟ್ಟೇಗೌಡ,
ಮೈಸೂರು
ಮೊ 9972242091

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group