ಕವನ : ಬಸವ ಬೆಳಗು

Must Read

ಬಸವ ಬೆಳಗು

ಬಸವನೆಂಬ ಬೆಳಗು
ಆತ್ಮ ಪರಿಶುದ್ಧತೆಯ ಒಳಹೊರಗು
ಸಮತೆಯ ಭಾವ
ವಾಸ್ತವದ ಅನುಭವ.

ಕಾಯಕನಿಷ್ಠೆಯ ಪ್ರಭಾವ
ಇಹಪರದ ಸೂಚಕ
ಬಾಳ ದೀವಿಗೆಗೆ ದಿಕ್ಸೂಚಿ
ಲಿಂಪೂಜೆಯ ಅನುಸೂಚಿ.

ಮತದ ಭ್ರಮೆಯ ಹುಟ್ಟಡಗಿಸಿ
ಮಾನವೀಯತೆಯ ಝೇಂಕರಿಸಿ
ಜನಮಾನಸದಿ ಅಚ್ಚೊತ್ತಿ
ಭಕ್ತಿ ಭಂಡಾರಿಯ ರೂಪಕ.

ಶರಣ ಚಳವಳಿಯ ರೂವಾರಿ
ಸಮಾಜದ ಅನನ್ಯತೆಯ ಸಿರಿ
ಅನುಭವ ಮಂಟಪದ ಚೈತನ್ಯ
ಚಿಂತನ ಮಂಥನ ಪ್ರಾಧಾನ್ಯ.

ವಿಶ್ವ ಮಾದರಿಯ ವ್ಯಕ್ತಿತ್ವ
ಕೇಡು ಬಯಸದ ತತ್ವ
ಬರಡು ಭೂಮಿಯಲು ಜಿನುಗು
ಹತಾಶೆಯಾದವರ ಅಂತಃಕರಣ.

ರೇಷ್ಮಾ ಕಂದಕೂರ, ಶಿಕ್ಷಕಿ
ಸಿಂಧನೂರ

Latest News

ಶಿರೀಷಗೆ ಗಡಿತಿಲಕ, ಶಶಿಗೆ ಜನ್ನಾ ಪ್ರಶಸ್ತಿ

ಬೆಳಗಾವಿ - ಇಲ್ಲಿಯ ಬಿ ಎ ಸನದಿ ಸಾಂಸ್ಕೃತಿಕ ಪ್ರತಿಷ್ಠಾನ ಕರ್ನಾಟಕ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಪ್ರತಿವರ್ಷ ಕೊಡಮಾಡುವ ಕನ್ನಡ ಗಡಿತಿಲಕ ಪ್ರಶಸ್ತಿಗೆ ಶಿರೀಷ ಅವರು ಆಯ್ಕೆಯಾಗಿದ್ದಾರೆ...

More Articles Like This

error: Content is protected !!
Join WhatsApp Group