ಏಕೆ ಮೌನವಾದರು?
ಏಕೆ ಮೌನವಾದರು ?
ನಮ್ಮ ಕದನದ ಯೋಧರು
ಅವರೋ ಭ್ರಷ್ಟರು
ಅಧಿಕಾರ ಕಳೆದುಕೊಂಡರು
ಪ್ರಾಮಾಣಿಕ ಅಭಯ ಹಸ್ತಕೆ
ಮಣ್ಣು ಶಗಣಿ ಮೆತ್ತಿತು
ಅವರೋ ಸಾವಿರಾರು
ಕೋಟಿ ಲೂಟಿ ಹೊಡೆದರು
ಇವರು ನೂರು ಕೋಟಿ ಹಣ
ವರ್ಗಾಯಿಸಿದರು
ಪಾಪ ಅಧಿಕಾರಿ ಆತ್ಮ ಹತ್ಯೆ
ಪ್ರಗತಿಪರ ಸಾಹಿತಿಗಳು
ತುಟಿ ಪಿಟಕ್ ಅನ್ನಲಿಲ್ಲ
ಅವರು 40% ಕಮಿಷನ್
ನಿಗದಿ ಮಾಡಿದರು
ಪಾಪ ಇವರು ಅದಕ್ಕೆ
ಜಿ ಎಸ್ ಟಿ ಹಾಕಿ
ಮುಂದುವರೆಸಿ ಬಿಟ್ಟರು
ನಮ್ಮ ಅಕಾಡೆಮಿ ಸದಸ್ಯರು
ಜಾಣ ಮೌನಕ್ಕೆ ಜಾರಿದರು
ಅಂದು ಬೀದಿಗಿಳಿದು
ಭಾಷಣ ಮಾಡಿದವರು
ಇಂದು ಕೂಲಿ ಸಿಕ್ಕಾಯ್ತು
ಕಿವುಡ ಕುರುಡುತನದ ವ್ಯಾಧಿ
ಅವರು ಭ್ರಷ್ಟರು ವಂಚಕರು
ಇವರೇನು ಸತ್ಯವಂತರು?
ನೂರಾರು ಸಹಕಾರಿ ಸಂಸ್ಥೆ
ಸರಕಾರಿ ಸಾನಿಧ್ಯದಲ್ಲಿ
ಜನರಿಗೆ ಮೋಸವೆಸಗಿದವು
ಲಕ್ಷ ಲಕ್ಷ ಗ್ರಾಹಕರು
ಬೀದಿಗೆ ಬಿದ್ದರು
ಸಾವಿರಾರು ಜನರ ರೈತರ ಬಲಿ
ಜ್ಯಾತ್ಯತೀತ ಎಂದರೆ
ಅಲ್ಪ ಸಂಖ್ಯಾತರ ಓಲೈಕೆಯೆ?
ನಿಗಮ ಅಕಾಡೆಮಿ ಸದಸ್ಯರ ಆಯ್ಕೆ
ಪಕ್ಷದ ಕಾರ್ಯಕರ್ತರಿಗೆ ಬಹುಮಾನವೆ?
ಪ್ರಶಸ್ತಿ ಸಮ್ಮಾನಕೆ ಭರ್ಜರಿ
ಲಾಬಿ ವಸೂಲಿ
ಮೌನ ತೈಲ ಬೆಲೆ ಏರಿಕೆಗೆ
ಬುದ್ಧಿಜೀವಿಗಳು ಸಾಹಿತಿಗಳು
ಪ್ರಗತಿಪರರು ಪ್ರತಿಭಟಿಸದೆ
ಶಾಂತವಾಗಿ ಮಲಗಿ ಬಿಟ್ಟರು
ಎದ್ದರೆ ಸದ್ದು ಮಾಡುತ್ತಾರೆ
ಕ್ರಾಂತಿಯ ಭ್ರಾಂತಿ
ಬದಲಾವಣೆ ಭ್ರಮೆ
ನಿಶಬ್ದರಾದರು ಸುಲಿಗೆ
ಶೋಷಣೆ ದಬ್ಬಾಳಿಕೆ ಮೋಸಕೆ
ಕಾರಣ ನಮ್ಮವರಿಗೆ ಪದವಿ
ಅಧಿಕಾರ ದೊರೆತಿವೆ
ಸಂವಿಧಾನ ಓದು ನಿಂತಿಲ್ಲ
ಇಂಕಿಲಾಬ್ ಜಿಂದಾಬಾದ್
_________________________
ಡಾ ಶಶಿಕಾಂತ ಪಟ್ಟಣ ರಾಮದುರ್ಗ