ಬದುಕಬೇಕು
ಏನೂಂತ ತಿಳಿಯಲಿ
ಕೈಕಾಲು ಚಳಿಗೆ ಸೋತುಬಂದವು
ಸ್ವಲ್ಪ ಮಟ್ಟಿಗೆ ಮಲಗಿ
ನಿದ್ರೆಗೆ ಜಾರಿತು ಮನ
ಎಚ್ಚರವಾದಾಗ ಕೈ ಕಾಲು
ಸ್ವಾಧೀನ ಕಳೆದುಕೊಂಡಿವೆ
ತನ್ನರಿವು ಗೊತ್ತಾಗದಂತೆ
ವಕ್ಕರಿಸಿತ್ತು ಪಾರ್ಶ್ವವಾಯು
ಮನದಲ್ಲಿ ಆತಂಕ ಏನೋ ನೋವು
ಕಾಣೆಯಾದ ದಾರಿ
ಯಾರಾದರೂ ಸಲಹೆ ನೀಡುತ್ತಾರೆ ಎನ್ನಲು
ವೈದ್ಯಕೀಯ ಚಿಕಿತ್ಸೆ ಸಲಹೆ
ಅಯ್ಯೋ ನಿನಗೆ ಹೀಗಾಯಿತಲ್ಲ
ಎನ್ನುವ ಮನಸುಗಳಿಗೆ ಕೊರತೆಯಿರಲಿಲ್ಲ
ಆದರೂ ನಡೆಯುವ ಕುಳಿತುಕೊಳ್ಳುವ
ಭಾಗಗಳಲ್ಲಿ ಸ್ವಾಧೀನತೆ ಇಲ್ಲ
ರೋಗ ಒಂದು ಕಗ್ಗಂಟು
ಮನೋಸ್ಥೈರ್ಯ ಒಂದೇ ಆಶಾಕಿರಣ
ಎಲ್ಲರೂ ಸಾಂತ್ವನ ಹೇಳುವರು
ದೈರ್ಯ ಕಳೆದುಕೊಳ್ಳ ಬೇಡ ಎಂದು
ಚಿಕಿತ್ಸೆ ಸಾಗಿದಾಗ ಮನಸ್ಸು ಹಂಬಲಿಸುತ್ತಿತ್ತು
ಮೊದಲಿನಂತೆ ನಾನಾಗ ಬಲ್ಲನೇನು
ನನ್ನ ನೋವು ನನಗರ್ಥವಾಗುವುದು
ಆದರೂ ನಾನು ಹೋರಾಟ ನಡೆಸಬೇಕಾಗಿದೆ.
ಬದುಕಿನ ದಾರಿಯಲ್ಲಿ ಕತ್ತಲಾವರಿಸಿದೆ
ಬೆಳಕಿನ ಕಾರಣಗಳಿಗಾಗಿ
ಕಾಯಬೇಕು
ನನ್ನ ನಂಬಿದವರ ಮುಂದೆ ನಾನು ಬದುಕಬೇಕು
ನೋವಿನ ಬಿಡುಗಡೆ ಗಾಗಿ ಹಾತೊರೆಯುವೆ
ಡಾ.ವೈ ಬಿ ಕಡಕೋಳ. .
ಶಿಕ್ಷಕ ಸಾಹಿತಿಗಳು.
ಮುನವಳ್ಳಿ-೫೯೧೧೧೭
ಸವದತ್ತಿ ತಾಲೂಕು
ಬೆಳಗಾವಿ ಜಿಲ್ಲೆ