- Advertisement -
ಗೌರವದ ಪಟ್ಟ
ಅವರು ನನ್ನ
ಕಥೆ ಕವನಗಳ
ಸಹಿಸದಿದ್ದರೆ
ಅದು ದಡ್ಡ
ಸಮಾಜದ ಆಸಹನೆಯ
ಮುಖ್ಯ ಲಕ್ಷಣ
ನಾನು ಸಮುದಾಯವನ್ನು
ವಿವಸ್ತ್ರಗೊಳಿಸುವದಿಲ್ಲ
ಕಾರಣ ಅದು
ಈಗಾಗಲೆ ಬೆತ್ತಲಾಗಿದೆ
ಅದಕ್ಕೆ ಮಾನ ಮುಚ್ಚಲು
ಬಟ್ಟೆ ಹೊಲಿಯುತ್ತಿಲ್ಲ
ಅದು ನನ್ನ ಕಸಬೂ ಅಲ್ಲ
ಅದು ದರ್ಜಿಯ ಕೆಲಸ
ಇಲ್ಲ ವಸ್ತ್ರ ವಿನ್ಯಾಸದವನ
ಚಿಂತೆ ಆಲೋಚನೆ
ಬೆತ್ತಲು ಜಗದಲ್ಲಿ
ನಾನು ಬಟ್ಟೆ ಹಾಕಿರುವೆ
ಅವರು ನನಗೆ
ಹುಚ್ಚ ಎನ್ನುವರು
ಅದು ನನಗೆ ಗೌರವದ ಪಟ್ಟ
ಡಾ. ಶಶಿಕಾಂತ ಪಟ್ಟಣ ರಾಮದುರ್ಗ
- Advertisement -
(ಸಾದತ್ ಹಸನ್ ಮಂಟೋ ಅವರ ಗುನುಗುವ
ಮಾತು)