ಕನಸು ಕಾಣು
ಕಾಣಬೇಕಿದೆ ಕನಸು
ಇರಲಿ ಒಂದಿಷ್ಟು ಆಸೆ
ನಲಿವ ರಂಗು ತುಂಬಲು
ಬದುಕಿಗೆ ಅರ್ಥ ಬರಲು.
ಹಕ್ಕಿಯಂತೆ ಹಾರಲು
ದುಂಬಿಯಂತೆ ಹೀರಲು
ಕೋಗಿಲೆಯ ಧ್ವನಿಯಾಗಲು
ರಾಗ ತಾಳ ಸೇರಲು.
ಕನಸು ಹೊತ್ತು
ದಿಟ್ಟ ಹೆಜ್ಜೆ ಇಟ್ಟು
ಭಾವ ಸುಧೆಯ ಹರಿಸಿ
ನೋವ ಸಹಿಸಿ ನುಗ್ಗಲು.
ನನಸಾಗುವ ಹವಣಿಕೆಯಲಿ
ಆತುರದ ಉನ್ಮಾದ ಏಕೆ
ಸಮರ ಸಾರುವೇ ಏಕೆ
ಅನವರತ ಕಾಯಕ ನಿಷ್ಠೆ ಸಾಕು.
ಕನಸು ಕಂಗಳ ತುಂಬಲಿ
ಹುರುಪು ಉತ್ಸಾಹ ಬೀರಲಿ
ಇರಿಸು ಮುರಿಸು ಆಗದಂತೆ
ನೀತಿ ನೇಮ ಮುರಿಯದಿರಲಿ ಸಾಕು.
ಕನಸು ಕಟ್ಟಬೇಕಿದೆ
ಮನಸು ಮಾಗಬೇಕಿದೆ
ದಿನಮಾನ ಉರುಳುತಿದೆ
ಕಳೆದು ಹೋಗುವ ಮುನ್ನ ಬಾಚಿಕೋ ಸಾಕು.
ರೇಷ್ಮಾ ಕಂದಕೂರ, ಶಿಕ್ಷಕಿ
ಸಿಂಧನೂರು

