- Advertisement -
ಗೆದ್ದು ಬೀಗಿದರು
ಪಕ್ಷ ಸೋತಿತು
ದೇಶ ಗೆದ್ದಿತು
ಇಲ್ಲ ಯಾರಿಗೂ
ಬಹುಮತ
ಇನ್ನು ಮುಂದೆ
ಇಲ್ಲ ಭಯ ಭೀತಿ
ಹಲವು ಜನರು
ಕೂಡಿ ಮಾಡುವ
ಹಂಗಿನಲ್ಲಿನ
ಅರಮನೆ
ಒಂದು ಟಿವಿಗೆ
ಎರಡು ರಿಮೋಟ್
ನೋಡುವ ಹಾಗಿಲ್ಲ
ಬೇಕಾದ ಪ್ರೋಗ್ರಾಮ್
ಒಂದು ತಟ್ಟೆಗೆ
ಎರಡು ಸವಟು
ಬೇಕಾಬಿಟ್ಟಿ
ಉಣ್ಣುವ ಹಾಗಿಲ್ಲ
ಇಂದೋ ನಾಳೆಯೋ
ನಾಯಕನ ಶಪಥ
ನಿಲ್ಲಿಸಬೇಕು ಕೂಡಲೇ
ಅಗ್ನಿಪಥ
ಮೊದಲಿನ ಹಾಗೆ
ವಿರೋಧಿಗಳನ್ನು
ಕುಕ್ಕುವ ಹಾಗಿಲ್ಲ
ಈಡಿ ಐಟಿ ಸಿಬಿಐ
ರೇಡ್ ಮಾಡುವ ಹಾಗಿಲ್ಲ
ಬೇಕಾದಾಗ ಬೇಕಾದವರನ್ನು
ಬಂಧಿಸುವ ಹಾಗಿಲ್ಲ
ಇಬ್ಬರಿಗೆ ಬೇಡಿದ ಖಾತೆ
ಉಳಿದವರೂ ಕೇಳುತ್ತಾರೆ
ಬೆಲೆ ಬಾಳುವ ಮಂತ್ರಿಗಿರಿ
ಪಾಪ ಅಬ್ಬರಿಸಿದ
ದೇವ ಮಾನವ ಮೌನ
ರಾಮನ ಕೃಪೆ ಆಗಲಿಲ್ಲ
ಕಾಶಿ ವಿಶ್ವನಾಥ
ಕೋಪಗೊಂಡ
ಹಿಂಸೆ ದ್ವೇಷ ಕೋಮು ದಳ್ಳುರಿ
ಅಹಂಕಾರದ ಸೋಲು
ಗೆದ್ದು ಬೀಗಿದರು
ಬುದ್ಧ ಬಸವರು
ಡಾ. ಶಶಿಕಾಂತ ಪಟ್ಟಣ ರಾಮದುರ್ಗ