- Advertisement -
ಬಾಗಲಕೋಟೆ: ತಾಲೂಕಿನ ಬೇವೂರ ಪಿ. ಎಸ್, ಸಜ್ಜನ ಕಲಾ ವಿದ್ಯಾಲಯ ದಲ್ಲಿ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು,
ಬೆನಕಟ್ಟಿಯ ಯೋಗ ಪಟು ಎನ್ ಬಿ ಮದಕಟ್ಟಿ ಭಾಗವಹಿಸಿ ಯೋಗಾಸನ ಪ್ರಾಣಾಯಾಮದ, ಮಹತ್ವ ಬಗ್ಗೆ ತಿಳಿಸುತ್ತಾ ಮಾನಸಿಕ ನೆಮ್ಮದಿಗೆ ಯೋಗ ಅವಶ್ಯಕ ವಾಗಿದೆ ಎಂದರು
ಹಿರಿಯ ಉಪನ್ಯಾಸಕರಾದ ಎಸ್ ಎಚ್ ಆದಾಪುರ್ ರ್ರಾಷ್ಟ್ರೀಯ ಸೇವಾ ಯೋಜನೆಯ ಅಧಿಕಾರಿ ಡಾಕ್ಟರ್ ಎಸ್ ಬಿ ಹ೦ಚಿನಾಳ, ಬಿಎಸ್ ಗೌಡರ್ ಕಾಲೇಜಿನ ಉಪನ್ಯಾಸಕರಾದ ಪಿ ವೈ ಬಡ್ಡಿ ಡಾಕ್ಟರ್ ಆದಪ್ಪ ಗೊರಚಕನವರ್ ಎನ್ ಬಿ ಬೆನ್ನೂರು ಬಸವಂತ ಹಿರೇಮನಿ ಸೇರಿದಂತೆ ಕಾಲೇಜಿನ ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಾಗೂ ಸಿಬ್ಬಂದಿ ವರ್ಗ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದರು