ದೀಪಾವಳಿ
ಸಾಲು ಸಾಲು
ದೀಪಗಳು
ಕಣ್ಣುಗಳು ಕೋರೈಸಲು
ಒಳಗಣ್ಣು ತೆರೆದು
ನೋಡಲು
ಜೀವನದ ಮರ್ಮ
ಕರ್ಮ ಧರ್ಮಗಳನು
ಅರಿಯಲು
ಸಾಲು ಸಾಲು
ದೀಪಗಳು
ಮೌಢ್ಯವ ಅಳಿಸಲು
ಜ್ಞಾನವ ಉಳಿಸಿ
ಬೆಳೆಸಲು
ಸಾಲು ಸಾಲು
ದೀಪಗಳು
ಮನೆಯನು ಬೆಳಗಲು
ಮನವನು ತೊಳೆಯಲು
ಸಾಲು ಸಾಲು
ದೀಪಗಳು
ನಮ್ಮ ನಿಮ್ಮ
ಎಲ್ಲರ ಮನೆ
ಹಾಗೂ ಮನವನು
ಬೆಳಗಲಿ
ಮಾನವೀಯತೆಯ
ಜ್ಯೋತಿ ಎಲ್ಲೆಡೆ
ಪಸರಿಸಲಿ
ಶುಭ ದೀಪಾವಳಿ 🌹
ಡಾ. ಜಯಾನಂದ ಧನವಂತ