ಚರಮ ಗೀತೆ
ದಮನದ ನೆರಳಿನಲಿ
ನ್ಯಾಯಕ್ಕೆ ಹುಡುಕಾಟ
ಸಾವು ನೋವಿನ ಲೆಕ್ಕ
ಮಸಣ ಮನೆಯು
ದರ್ಪದ ತುಳಿತದಲಿ
ಸತ್ಯಕ್ಕೆ ಹೋರಾಟ
ಶೂಲಕ್ಕೇರುವ ಗೋಣು
ನೂರು ನೂರು
ಹಿರಿಯಣ್ಣ ದೊಡ್ಡಣ್ಣ
ಹೊಸಕಿ ಹಾಕಿದ ದ್ವೀಪ
ಬದುಕು ದುಸ್ತರವಾತು
ಹಗಲಿನಲಿ ಕೈ ಕೊಳವು
ಜಗವಿಂದು ನಲಗುತಿದೆ
ಅಲ್ಲ ದುಷ್ಟರ ದಾಳಿ
ಶಿಷ್ಟರ ಮೌನ ಎಲ್ಲೆಡೆ ಹರಡಿ
ಕಣ್ಣೀರು ಕನಿಕರ ಹಿಂಸೆ ಕೊಲೆಗೆ
ರಾಷ್ಟ್ರ ರಾಷ್ಟ್ರಗಳ ಯುದ್ಧ
ವಾಯು ನೆಲೆ ಕ್ಷಿಪಣಿ ಸದ್ದು
ಸಾಯುತಿದೆ ಜೀವ ಸೆಲೆ
ಮರಣ ಚರಮ ಗೀತೆ
ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ

