ನಗೆ ಹುಡುಕಬೇಕು
ದುಃಖದ ದೌಲತ್ತಿಗೆ
ನಾನೊಬ್ಬನೆ ಸಿರಿವಂತ
ಎಂದುಕೊಂಡಿದ್ದೆ
ಹತ್ತಿರದಿಂದ ನೋಡಿದರೆ
ಎಲ್ಲರೂ ಧನಿಕರೆಆಗಸದಲಿ ಹಾರುತ್ತ
ಗುಂಪನಗಲಿದ ಗುಬ್ಬಿ
ದುಃಖಿಸದೆ ಮತ್ತೆ
ಗೂಡು ಕಟ್ಟುವುದು ಕಂಡು
ಮೂಕನಾದೆಕಾಲಲ್ಲಿ ಬೂಟಿಲ್ಲ ಎಂದು
ಕಿರುಚಾಡುವ ಬಾಲಕ
ಕಾಲಿಲ್ಲದ ಬಡವ
ಬೀದಿಯಲಿ ಹೂವು
ಮಾರುವುದು ಕಂಡು ಮೌನವಾದಬದುಕು ಇಷ್ಟೇ ನೋವು
ನುಂಗುವವರ ಕಂಡು
ಬಾಳು ಕಾಣಲು ಬೇಕು
ದುಃಖದ ಮಡುವಿನಲಿ
ನಗೆ ಹುಡುಕಬೇಕು
________________________
ಡಾ. ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ

