ಎಲ್ಲಿ ಹೋದಿರಿ
ದಿನವಿಡಿ ದುಡಿದು
ಬಳಲಿ ಬೆಂಡಾದ ಜೀವ
ಉಂಡು ಹಾಸಿಗೆ ಮೇಲೆ
ನಿಮ್ಮ ಹುಡುಕುತಿರುವೆ
ಎಲ್ಲಿ ಹೋದಿರಿ ನನ್ನ
ಸುಂದರ ಕನಸುಗಳೇ
ನೋವಿಗೆ ತಂಪು ನಿಮ್ಮಾಶ್ರಯ
ನೆಮ್ಮದಿ ಸುಖ ತೃಪ್ತಿ
ಸಂತಸದ ಹೊನಲು
ದಣಿವು ದೇಹಕೆ
ಮನಸಿಗೆ ನಿಮ್ಮ ಬಣ್ಣದ
ಬಯಕೆಗಳ ಸಂಭ್ರಮ
ಎನ್ನೆದೆಯ ಗೂಡಿನಲ್ಲಿ
ಒಣಗಿದ ಮರದ ಬೇರು
ಇರಲಿ ನಿಮ್ಮ ಸ್ನೇಹ ಪ್ರೀತಿ
ಒಲವು ಸಿಂಚನ
ಸುಳಿ ಬಿಟ್ಟು ಹೊರ ಬರಲಿ
ನಗೆ ಸ್ಪೂರ್ತಿ ಹಸಿರು ತೆನೆಯು
__________________________
ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ

