ಕವನ ; ಯುದ್ಧ ಬೇಡ

Must Read

ಯುದ್ಧ ಬೇಡ

ಯುದ್ಧ ಬೇಡ
ಬುದ್ಧ ಬರಲಿ
ಶುದ್ಧ ಬದುಕು
ಕಾಣುವ

ದ್ವೇಷ ಮರೆತು
ಬಸವ ಬರಲಿ
ದುಡಿದು ತಿನ್ನಲು
ಕಲಿಯುವ

ಕ್ರೂರತನ ಬಿಟ್ಟು
ಕರೆಯಬೇಕು ಮಹಾವೀರನ
ಶಾಂತಿ ಮಂತ್ರವ
ಜಪಿಸಲು

ಸಮತೆ ಪ್ರೀತಿ ಪಸರಿಸಲು
ಅಂಬೇಡ್ಕರ್ ರ
ಸಂವಿಧಾನ ಮತ್ತೆ ಓದು
ಮಾಡ ಬೇಕು

ಗುಲಾಮಗಿರಿಗೆ ಕೊನೆ ಹೇಳಿ
ಸ್ವಾಭಿಮಾನ ಮೆರೆಯುವ
ಬಾಪು ಕನಸಿನ ಗ್ರಾಮ ಭಾರತ
ನಾವು ಗಟ್ಟಿಗೊಳಿಸುವ

ಡಾ ಶಶಿಕಾಂತ ಪಟ್ಟಣ ರಾಮದುರ್ಗ

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group