Homeಕವನಕವನ : ಮಳೆರಾಯ

ಕವನ : ಮಳೆರಾಯ

spot_img

ಮಳೆರಾಯ

ಇಳೆಯನರಸಿ ಬಾರೋ
ಧರೆಯ ಧಗೆಯ ತಣಿಸಿ
ವರ್ಷಧಾರೆ ಎರೆದು
ತಂಪನೆರೆದು ಸಂತೈಸಿ.

ಚಿಗುರಿ ಬೆಳೆದು
ನಗೆಯ ತುಂಬಿ
ಬವಣೆ ನೀಗಿ
ಚೈತನ್ಯ ತುಂಬಿ.

ಬಂಜೆ ಭೂಮಿ ಕಳೆದು
ಮಂದಹಾಸ ಬೀರಿ
ಸಂಕುಲವ ಪೊರೆದು
ವ್ಯಾಕುಲತೆ ಮೀರಿ.

ಹಸಿರ ರಾಶಿ ಹೊತ್ತು
ಹಸಿವ ತೀರಿಸಿ
ಬಲವ ಪೂರೈಸಿ
ಛಲದ ಬದುಕಿಗೆ ನಾಂದಿ ಹಾಡಿ.

ಭರವಸೆ ಕೊಟ್ಟು
ನವ ಚೇತನ ಉತ್ಸವದಿ
ಮುಗಿಲ ಮಲ್ಲಿಗೆ ಕಂಪು ಹರಸಿ
ಹನಿಯ ಚೆಲ್ಲಿದೆ.

ಮೊಳಕೆ ತರಿಸಿ
ಜಲವ ಹರಿಸಿ
ಒಲವ ರಂಗು ತಂದಿದೆ
ಬಾಳ ಬೆಳಕಿಗೆ ಮುನ್ನುಡಿಯಾಗುತ.

ರೇಷ್ಮಾ ಕಂದಕೂರ

RELATED ARTICLES

Most Popular

error: Content is protected !!
Join WhatsApp Group