- Advertisement -
ಪ್ರಕೃತಿ
ಮಂಜಿನ ಹೊದಿಕೆಯ ಹೊದ್ದು ಮಲಗಿದ ಗಿರಿಸಾಲು,
ಹಸಿರಸಿರು ಹಾಸಿನಲಿ ತಂಗಾಳಿ ಬೀಸಿನಲಿ,
ಆಗಸವು ಭುವಿಗಿಳಿದು ಬರೆಯುತಿದೆ ಪ್ರೇಮಕಾವ್ಯ,
ಅಂಕುಡೊಂಕು ಸಾಲುಗಳಲಿ, ತಟಪಟದ ಪದಗಳಲಿ,
ಎಲೆಯಂಚಿನ ಮೊನಚಿನಲಿ, ಚಿಗುರು ಕೆಂಬಣ್ಣದಲಿ,
ಉತ್ತುಂಗದ ಉಪಮೆಯಲಿ,
ಬೆಟ್ಟದಡಿಯ ಉಪಮಾನದಲಿ,
ಪುಷ್ಪಗಳ ಅಲಂಕಾರದಲಿ,
ಇಂದ್ರಚಾಪ ವೃತ್ತದಲಿ,
ಚೆಂದದ ಸಂಧಿಗಳಲಿ,
ಮಾಸದ ಸೌಂದರ್ಯದ ಸಮಾಸಗಳಲಿ,
ಮನದ ನದಿಗಳಲಿ ಚೈತನ್ಯದ ಸಂಚಾರ
ನೋಡಿದಷ್ಟು ನಯನ ಮನೋಹರ,
ಪ್ರಕೃತಿಯ ವ್ಯಾಕರಣದ ವಯ್ಯಾರ…
- Advertisement -
ಪ್ರಸನ್ನ ಜಾಲವಾದಿ architect ಬೆಂಗಳೂರು