- Advertisement -
ನಗೆಗಾರ ಗಂಗಾವತಿ ಪ್ರಾಣೇಶ
(ಸುನೀತ ಛಂದಸ್ಸಿನಲ್ಲಿ ಬರೆಯಲಾಗಿದೆ)
ಬೀಚಿ ಮೈದಾನದಲಿ ಹಸುರ ಮೇಯಿತು ಪ್ರಾಣಿ
ಮಂದಹಾಸವ ಬೀರಿ, ಚಂದ್ರಚುಕ್ಕಿಯ ತೋರಿ
ನಗೆಗಂಗೆಯಲಿ ಮಿಂದು, ನಡೆದು ಸಾಗಿತು ಮೀರಿ
ದೂರದೂರಕೆ ದಾಟಿ ಸಪ್ತ ಪರ್ವತ ಶ್ರೇಣಿ.
ತಿಳಿಹಾಸ್ಯ ಹಾಲ್ಗರೆದು ಜನರಿಗೂಡಿಸಿ ತಣಿಸಿ
ಮೋಡಿ ಮಾಡಿತು ನುಡಿಮಂತ್ರ ದಂಡವ ಹಿಡಿದು
ಉತ್ತರದ ಕರುನಾಡ ಭಾಷೆ ಸೊಬಗನು ನುಡಿದು
ಮಂತ್ರಮುಗ್ಧರ ಮಾಡುತವರ ಖುಷಿ ಇಮ್ಮಡಿಸಿ.
- Advertisement -
ಸಾಹಿತ್ಯ ದರ್ಪಣದಿ ಮುಖವ ಕಂಡರು ಚೂರು
ಕನ್ನಡಕದಲಿ ಕನ್ನಡಮ್ಮನ ಪ್ರತಿಬಿಂಬ
ತೋರಿ, ನಗೆಚಾಟಿ ಬೀಸುತಲಿ ಮಾಡುತಾರಂಬ
ಸಂತಸದ ಬೀಜಗಳ ಬಿತ್ತಿ ಬೆಳೆಯಿತು ಪೈರು.
ಸಾವಿರದ ನಗೆಬುಗ್ಗೆ ಚಿಮ್ಮಿಸುವ ಸರದಾಚಿಂತೆವ್ಯಥೆಗಳ ಕಳೆವ ನಗುಮೊಗದ ನಗೆಗಾರ
ಎನ್.ಶರಣಪ್ಪ ಮೆಟ್ರಿ