Homeಕವನಕವನ : ಬಂಜೆಯಾದಳೆ ಭೂಮಿ

ಕವನ : ಬಂಜೆಯಾದಳೆ ಭೂಮಿ

ಬಂಜೆಯಾದಳೆ ಭೂಮಿ

ಬಂಜೆ ಎಂಬ ಪದ ಬೇಡ
ಈ ಭೂ ತಾಯಿಗೆ
ರೈತರು ಮಕ್ಕಳಿರುವಾಗ
ರೈತನ ಹಡೆದವಳು ಭೂ ತಾಯಿ
ಬೆಳೆದ ಭೂ ಒಡಲಲ್ಲಿ
ದವಸ ಧಾನ್ಯ ತರಕಾರಿ
ಹಣ್ಣು ಹಂಪಲು ಭಾರಿ
ಬಿಡಲಿಲ್ಲ ಅವನು
ಮರಳು ಕಾಳು ಕಡಿ
ಬೆನ್ನು ಹತ್ತಿದರು ದಲ್ಲಾಳಿ
ಸೊರಗಿದ ಸೋತ ರೈತ
ತಾಯಿ ಎದುರು ಶರಣಾದ
ನೇಣು ಆತ್ಮ ಹತ್ಯೆ
ಮಗನ ಕಳೆದು ಕೊಂಡ
ತಾಯಿ ವೇದನೆ ಭೂಮಿಗೆ
ಮತ್ತೆ ಬಂಜೆಯಾದಳು
ಸ್ಮಾರ್ಟ್ ಸಿಟಿ ಮೆಟ್ರೋ ಸಿಟಿ
ಕಾರ್ಪೊರೇಟ್ ಜಗತ್ತಿಗೆ
ಮುಚ್ಚಿದರು ಕೆರೆ ಬಾವಿಗಳ
ಕಟ್ಟಿದರು ಮುಗಿಲು ಮುಟ್ಟುವ
ಮಹಲು ಅಪಾರ್ಟ್ಮೆಂಟ್ ಮಾಲು
ಗಿಡ ಮರ ಕಡಿದರು
ಎಲ್ಲೆಂದರಲ್ಲಿ ಮೊಬೈಲ್
ಟವರ್ ದಾಳಿ
ಸತ್ತವು ಗುಬ್ಬಿ ಹದ್ದು
ಮಾಯವಾದವು ಅಳಿಲು
ನೆಲ ಜಲ ಮರ ಗಿಡ
ಕಾಡು ಕಡಿದರು
ಕೊಳ್ಳೆ ಹೊಡೆದರು
ಗಣಿ ಲೂಟಿ ಮಾಡಿ
ಅತಿ ವೃಷ್ಟಿ ಅನಾವೃಷ್ಟಿ
ಈಗಲಾದರೂ ಮನುಜ
ಏಳ ಬೇಕು
ಜೀವ ಜಲದ ಬೇರಿಗೆ
ನೀರು ಹಣಿಸ ಬೇಕು
ಇಲ್ಲದಿರೆ ಬರಡಾಗುವಳು
ಬರಡಾದಳು ಭೂದೇವಿ
ಹೆತ್ತ ಒಡಲ ನೋವು
ಬಿಕ್ಕತಿಹಳು ಭೂ ತಾಯಿ
ಬಂಜೆ ಬೇನೆ ತೊರೆಯಲು
ಆಗದಿರಲಿ ಭೂಮಿ ಮತ್ತೆ ಬಂಜೆ
—————————————-
ಅನಿತಾ ಸಿದ್ದಣ್ಣವರ, ಬೆಳಗಾವಿ

RELATED ARTICLES

Most Popular

error: Content is protected !!
Join WhatsApp Group