- Advertisement -
ಡಾ.ಕಲ್ಬುರ್ಗಿ ಬಿದ್ದ ಮರವಲ್ಲ
ಎಪ್ಪತ್ತೇಳು ವರುಷದ ಮರ
ಹಣ್ಣು ಹೂವು ಕಾಯಿ
ಶರಣ ಸಂಸ್ಕೃತಿಯ ನೆರಳು
ಗೂಡು ಕಟ್ಟಿ ಕೊಂಡಿದ್ದವು
ಕಾಗಿ ಗುಬ್ಬಿ ಪಾರಿವಾಳ
ಅಂದೊಮ್ಮೆ ಕಟುಕ
ಮರವ ಕಡಿದು ಉರುಳಿಸಿದ
ಡಾ. ಕಲ್ಬುರ್ಗಿ ಬಿದ್ದ ಮರವಲ್ಲ
ಬಿತ್ತಿದ ಬೀಜ ಬತ್ತದ ತೇಜ
ಸತ್ಯ ಸಮತೆ ನೇರ ನಿಷ್ಠುರತೆ
ಬರಹ ಚಿಂತನ ವೈಚಾರಿಕತೆ
ಕನ್ನಡದ ಕೊಲಂಬಸ್
ಛಲದಂಕ ಮಲ್ಲ ಒಂಟಿ ಸಲಗ
ಮರೆತು ಹೋಗದ ಮುಗ್ಧ ಮನ
ವಚನಗಳ ರಾಶಿ ಕಲ್ಯಾಣವೇ ಕಾಶಿ
ಅಪ್ಪ ಬಸವನ ಮಾತು
ಹುಸಿ ಹೋಗದಿರಲು
ಹಗಲಿರುಳು ದುಡಿದರು
ಉಸಿರ ಒತ್ತೆಯನಿತ್ತು.
ಸಿಡುಕು ದುಡುಕು
ಆದರೂ ಪ್ರೀತಿಯ ತವರು
ಯಾರೇ ತಿವಿದರೂ ಚುಚ್ಚಿದರೂ
ಬಗ್ಗದ ಜೀವ ನುಂಗಿದ ನೋವ
ಸಾವಿನಲ್ಲಿ ಸತ್ಯ ಮೆರೆದ ಸಂಶೋದಕ
ಇಗೋ ನಿಮಗೆ ನಮ್ಮ ನಮನ
ಡಾ ಶಶಿಕಾಂತ ಪಟ್ಟಣ -ರಾಮದುರ್ಗ