- Advertisement -
ಎಲ್ಲಿ ಇರುವೆ ?
ಎಲ್ಲಿ ಇರುವೆ ?
ಪಾರಿಜಾತವೇ
ಗಗನ ಕುಸುಮ
ಸ್ನೇಹ ಪ್ರೇಮವೇ
ಎಲ್ಲಿ ಇದ್ದೆ
ಕೊಳದ ತಾವರೆ
ಮುಳ್ಳು ಮುತ್ತಿದ
ಕೆಂಗುಲಾಬಿಯೇ
- Advertisement -
ಮನದ ಬಯಕೆ
ಮುರುಗ ಮಲ್ಲಿಗೆ
ಪ್ರೀತಿ ಪಯಣಕೆ
ಹೆಜ್ಜೆ ಮೆಲ್ಲಗೆ .
ಜಾಜಿ ಕನಕ
ಕಂಪು ಸಂಪಿಗೆ
ಮಧುರ ಬದುಕಿನ
ಸೊಂಪಿಗೆ
ಗೆಳತಿ ನೀನು
ಭಾವ ಭಾಷೆ
ನನ್ನ ಕಾವ್ಯದ
ಮುಗ್ಧ ಪದಗಳೇ
- Advertisement -
ಬನ್ನಿ ಭಾವಗಳೆ
ಕವನ ಲಹರಿ
ಒಲವು ಕಟ್ಟುವ
ಬಾಳ ಗೂಡಿಗೆ
————————-
ಡಾ. ಶಶಿಕಾಂತ ಪಟ್ಟಣ ಪುಣೆ