ಕವನ : ಗುರುವಿನ ಮಹಿಮೆ

Must Read

ಗುರುವಿನ ಮಹಿಮೆ.

ಗುರುವಿನ ಶಕ್ತಿ ಅರಿತವರಿಲ್ಲ
ಆತನ ಮಹಿಮೆ ಬಲ್ಲವರಿಲ್ಲ
ಅರಿವೇ ಗುರುವು ಗುರುವೇ ಹರಿಯು

ಅಕ್ಷರ ಬೀಜವ ಬಿತ್ತಿ
ಅಜ್ಞಾನದ ಕಳೆಯ ಕಿತ್ತಿ
ಜ್ಞಾನದ ಹಣತೆಯ ಒತ್ತಿ
ಬಾಳು ಬೆಳಗಿದ ಜೀವ ಕಣೊ

ಜ್ಞಾನದ ಹಣತೆಯ ಹಚ್ಚಿ
ಅಜ್ಞಾನದ ಕೊಳೆಯ ಕೊಚ್ಚಿ
ಮಕ್ಕಳ ಜ್ಞಾನ ಸುಧೆಯ ಮೆಚ್ಚಿ
ಬಳಪವ ಪಿಡಿಸಿದ ದೈವ ಕಣೋ

ತಿದ್ದಿ ತೀಡಿ ಬುದ್ಧಿ ಮಾತ ಹೇಳಿ
ಕೈ ಹಿಡಿದು ಅಕ್ಷರವ ಪೇಳಿ
ಮಕ್ಕಳನು ಸನ್ಮಾರ್ಗಕೆ ತಳ್ಳಿ
ದಾರಿ ತೋರಿಸಿದ ಶಕ್ತಿ ಕಣೋ

ಅಜ್ಞಾನದ ಕತ್ತಲೆಯ ಅಳಿಸಿ
ಸುಜ್ಞಾನ ಜ್ಯೋತಿಯ ಬೆಳಗಿಸಿ
ಸನ್ನಡತೆ ಸದ್ಭುದ್ದಿಯ ಕಲಿಸಿ
ಜ್ಞಾನ ಮಾರ್ಗದಲಿ ನಡೆಸಿ
ಬಾಳು ಬೆಳಗಿದ ದೈವ ಕಣೋ
ಭವಿಷ್ಯ ರೂಪಿಸಿದ ಜೀವ ಕಣೋ

ಕ್ಯಾದಿಗೆಹಾಳ್ ಉದೇದಪ್ಪ ಶಿಕ್ಷಕರು ಪಿ.ವಿ.ಎಸ್.ಬಿ.ಸಿ.ಪ್ರೌಢ ಶಾಲೆ,ಹೊಸಪೇಟೆ              ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರು.            ಕನ್ನಡ ಸಾಹಿತ್ಯ ಪರಿಷತ್ತು ಹೋಬಳಿ ಅಧ್ಯಕ್ಷರು.

Latest News

ಕವನ : ಶ್ರದ್ಧೆ

ಶ್ರದ್ಧೆಶ್ರದ್ಧೆ ಎಂದರೆ ಕೇವಲ ನಂಬಿಕೆ ಅಲ್ಲ, ಸಾಧನೆಯ ಕೀಲಿ ಕೈ ಆಗಿದೆಯಲ್ಲ ಹೃದಯದಿಂದ ಹೊಮ್ಮುವ ಶಕ್ತಿ ಎಲ್ಲ ಕಣ್ಣಿಗೆ ಕಾಣದ ಅದ್ಭುತ ಅನುಭವದ ಬೆಲ್ಲ ಹೆಜ್ಜೆಗೆ ದಿಕ್ಕು ತೋರುವ ಬೆಳಕ ಸಾಧನೆಯ ಹಾದಿಯ...

More Articles Like This

error: Content is protected !!
Join WhatsApp Group