ಕವನ : ನಾಜೂಕು ನಜರು

Must Read

ನಾಜೂಕು ನಜರು

ನಿನ್ನ ಆ ಸೌಂದರ್ಯವ
ಕಂಡ ಈ ನನ್ನ
ನಾಜೂಕು ನಜರಿಗೂ
ಜೀಕುವ ಭಾವಲಹರಿಗೂ
ಸಲ್ಲದ ಪೈಪೋಟಿಯೊಂದು
ಸದ್ದಿಲ್ಲದೆ ಅಲೆಯ
ಎಬ್ಬಿಸಿರಲು, ಆ ಸಲ್ಲಾಪವ
ಲೇಖನಿಗೆ ವರ್ಗಾಯಿಸುವುದೋ
ಬೇಡವೋ ಎಂಬ
ಹೊಸಗೊಂದಲದ
ಗೂಡೊಂದು ಸದ್ದಮಾಡುತ್ತಲೇ
ತನ್ನೆಡೆಗೆ ನನ್ನನ್ನು ಸೆಳೆಯುತಿದೆ…

ಸೆಳೆವ ಗೊಂದಲದ
ಗೂಡೆಡೆಗೆ ಹೋಗಲೋ
ಅದಾಗಲೇ ಸೆಳೆದ
ಕಾವ್ಯದ ಅಮಲಿನಲ್ಲಿ
ಮುಳುಗಲೋ,
ಮತ್ತೊಂದು ಗೊಂದಲ
ಮರಿ ಹಾಕಿ ನನ್ನೆಡೆ ನೋಡಿ
ಮುಸಿನಗಲು, ಆ ನಿನ್ನ ಸೆಳೆದ
ಸೌಂದರ್ಯ ನನ್ನಿಂದ
ದೂರ ಸಾಗಿಯಾಗಿತ್ತು…

ನನ್ನೆಡೆ ಕಿರುನಗೆಯ ಬೀರಿ
ತುಸುದೂರ ನಿಂತಿದ್ದ
ಕವಿತೆಗೆ ನಾನು ಸೋತಾಗಿತ್ತು…

ಈ ಕಾವ್ಯಾಗ್ನಿಯ ಬೆರಳುಗಳು
ಕವಿತೆಯ ತಕಧಿಮಿತಕ್ಕೆ
ಸಿದ್ಧವಾಗಿ ಕಾವ್ಯಕ್ಕೆ
ಮುನ್ನುಡಿಯ ಬರೆದಾಗಿತ್ತು…

ಕಾವ್ಯಾಗ್ನಿ 🔥

ತಾರಾ ಸಂತೋಷ್ ಮೇರವಾಡೆ ಗಂಗಾವತಿ

Latest News

ಮುಷ್ಕರದಲ್ಲಿ ಸಂಸದರ ಎದುರೆ ಆತ್ಮಹತ್ಯೆಗೆ ಯತ್ನಸಿದ ರೈತ

ಮೂಡಲಗಿ:-ತಾಲೂಕಿನ ಗುರ್ಲಾಪೂರ ಕ್ರಾಸದಲ್ಲಿ ಗುರುವಾರದಿಂದ ಪ್ರಾರಂಭವಾಗಿದ್ದ ರೈತರ ಪ್ರತಿಭಟನೆ ಸೋಮವಾರ ಐದನೆಯ ದಿನಕ್ಕೆ ಬೃಹತ್ ಹೋರಾಟಕ್ಜೆ ಕಾಲಿಟ್ಟಿದ್ದು ಮುಷ್ಕರ ನಿರತ ರೈತನೊಬ್ಬ ವಿಷ ಸೇವಿಸಿದ ಘಟನೆ...

More Articles Like This

error: Content is protected !!
Join WhatsApp Group